ರಾಯಚೂರು: ಕೂಲಿ ಕೆಲಸ ಅರಿಸಿಕೊಂಡು ಗುಳೆ ಹೋಗಿದ್ದ ಕಾರ್ಮಿಕರು ಈಗ ಮತ್ತೆ ತಮ್ಮ ತಮ್ಮ ಊರುಗಳತ್ತ ಮುಖಮಾಡಿದ್ದಾರೆ.
ಕೂಲಿ ಕೆಲಸ ಅರಿಸಿ ಗುಳೆ ಹೋಗಿದ್ದ ಕಾರ್ಮಿಕರು ಸ್ವಗ್ರಾಮಗಳತ್ತ ವಾಪಸ್ - ರಾಯಚೂರು ವಲಸೆ ಕಾರ್ಮಿಕರು ವಾಪಸ್ ಸುದ್ದಿ
ಜಿಲ್ಲೆಯಿಂದ ತೆರಳಿದ್ದ ಬೆಂಗಳೂರಿಗೆ ವಲಸೆ ಕಾರ್ಮಿಕರು ಸಂಸಾರ ಸಮೇತವಾಗಿ ಮರಳುತ್ತಿದ್ದಾರೆ. ಬೆಂಗಳೂರಿನಲ್ಲಿ ಸೋಂಕಿನ ಹಾವಳಿ ಹೆಚ್ಚಳದಿಂದ ವಿಚಲಿತಗೊಂಡಿರುವ ಕೂಲಿ ಕಾರ್ಮಿಕರು ವಾಪಸ್ ಬರುತ್ತಿದ್ದಾರೆ.
![ಕೂಲಿ ಕೆಲಸ ಅರಿಸಿ ಗುಳೆ ಹೋಗಿದ್ದ ಕಾರ್ಮಿಕರು ಸ್ವಗ್ರಾಮಗಳತ್ತ ವಾಪಸ್ ವಲಸೆ ಹೋಗಿದ್ದ ಕಾರ್ಮಿಕರು ಸ್ವಗ್ರಾಮಗಳತ್ತ](https://etvbharatimages.akamaized.net/etvbharat/prod-images/768-512-7909355-988-7909355-1594010539202.jpg)
ವಲಸೆ ಹೋಗಿದ್ದ ಕಾರ್ಮಿಕರು ಸ್ವಗ್ರಾಮಗಳತ್ತ
ಜಿಲ್ಲೆಯಿಂದ ತೆರಳಿದ್ದ ವಲಸೆ ಕಾರ್ಮಿಕರು ಸಂಸಾರ ಸಮೇತವಾಗಿ ಹಿಂದಕ್ಕೆ ಮರಳುತ್ತಿದ್ದಾರೆ. ಬೆಂಗಳೂರಿನಲ್ಲಿ ಸೋಂಕಿನ ಹಾವಳಿ ಹೆಚ್ಚಳದಿಂದ ವಿಚಲಿತಗೊಂಡಿರುವ ಕೂಲಿ ಕಾರ್ಮಿಕರು ವಾಪಸ್ ಬರುತ್ತಿದ್ದಾರೆ.
ವಲಸೆ ಹೋಗಿದ್ದ ಕಾರ್ಮಿಕರು ಸ್ವಗ್ರಾಮಗಳತ್ತ ವಾಪಸ್
ಜಿಲ್ಲೆಯ ನಾನಾ ಭಾಗಗಳಿಂದ ಗ್ರಾಮೀಣ ಜನರು ಕೂಲಿ ಕೆಲಸ ಅರಿಸಿಕೊಂಡು, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ಬೆಂಗಳೂರು ಸೇರಿದಂತೆ ನಾನಾ ಕಡೆ ಕೆಲಸಕ್ಕಾಗಿ ಮನೆಯಲ್ಲಿ ವಯೋ ವೃದ್ಧರನ್ನ ಬಿಟ್ಟು, ಉಳಿದ ಕುಟುಂಬದ ಸದಸ್ಯರು ಸಮೇತವಾಗಿ ವಲಸೆ ಹೋಗಿದ್ದವರು ಈಗ ಯಾವುದೇ ಕೆಲಸಗಳು ಸಿಗದಿರುವುದರಿಂದ ಮರಳಿ ಬರುತ್ತಿದ್ದಾರೆ.