ಕರ್ನಾಟಕ

karnataka

ETV Bharat / state

ಸಿಗದ ವರ್ಗಾವಣೆ: ರಾಯಚೂರು ಜಿಲ್ಲೆಯಲ್ಲಿ ಮಾನಸಿಕ ಖಿನ್ನತೆಯಿಂದ ಶಿಕ್ಷಕಿ ಆತ್ಮಹತ್ಯೆ - Mental depression update

ಮಾನಸಿಕ ಖಿನ್ನತೆಯಿಂದ ಆದರ್ಶ ವಿದ್ಯಾಲಯ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಮಗಳು ಇತ್ತೀಚೆಗೆ ಸಾವನ್ನಪ್ಪಿದ್ದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ.

ಮೃತ ಶಿಕ್ಷಕಿ ಜಗದಾಂಬ

By

Published : Nov 22, 2019, 10:31 PM IST

Updated : Nov 23, 2019, 7:08 AM IST

ರಾಯಚೂರು: ಆದರ್ಶ ವಿದ್ಯಾಲಯದ ಶಿಕ್ಷಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಮಸ್ಕಿ ರಸ್ತೆಯಲ್ಲಿನ ಜ್ಞಾನಗಂಗಾ ಶಾಲೆ ಬಳಿಯ ಮನೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಹೊಳಲ್ಕೆರೆ ಮೂಲದ ಜಗದಾಂಬಿಕ(55) ಮೃತ ಶಿಕ್ಷಕಿಯೆಂದು ಗುರುತಿಸಲಾಗಿದೆ.

ಲಿಂಗಸೂಗೂರಿನ ಆದರ್ಶ ವಿದ್ಯಾಲಯದಲ್ಲಿ ಎರವಲು ಸೇವೆಯಲ್ಲಿ ಶಿಕ್ಷಕಿಯಾಗಿ ಜಗದಾಂಗ ಕರ್ತವ್ಯ ನಿವರ್ಹಿಸುತ್ತಿದ್ದರು. 2001ರಲ್ಲಿ ಮಸ್ಕಿ ತಾಲೂಕಿನ ಉಸ್ಕಿಹಾಳದ ಸೇವೆಗೆ ಸೇರ್ಪಡೆಗೊಂಡು, ಬಳಿಕ 2002ರಲ್ಲಿ ಸ್ಥಳೀಯ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡಿದ್ದರು. ಅಲ್ಲಿಂದ 2019ರ ಅಂಕ್ಟೋಬರ್​ನಲ್ಲಿ ಕಡ್ಡಾಯ ವರ್ಗಾವಣೆಯಲ್ಲಿ ಲಿಂಗಸೂಗೂರು ತಾಲೂಕಿನ ಚಿಕ್ಕಹೆಸರೂರು ಸರಕಾರಿ ಶಾಲೆಗೆ ನಿಯೋಜನೆಗೊಂಡಿದ್ದರು.

ಕೆಲ ದಿನಗಳ ನಂತರ ಲಿಂಗಸೂಗೂರಿನಲ್ಲಿ ಆದರ್ಶ ವಿದ್ಯಾಲಯದಲ್ಲಿ ಎರವಲು ಸೇವೆ ಮೇಲೆ ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಮನೆಯಲ್ಲಿ ಒಂಟಿಯಾಗಿರುವುದು, ವರ್ಗಾವಣೆ ಸಿಗುತ್ತಿಲ್ಲ ಹಾಗೂ ಮಗಳ ಸಾವಿನಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆ ಕುರಿತು ಲಿಂಗಸೂಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Nov 23, 2019, 7:08 AM IST

ABOUT THE AUTHOR

...view details