ರಾಯಚೂರು: ಕೋವಿಡ್ ರೋಗಿಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಿ ಜಾಗೃತಿ ಮೂಡಿಸುವುದು ಅತ್ಯಂತ ಅವಶ್ಯವಾಗಿದೆ ಎಂದು ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಹೇಳಿದರು.
ಕೋವಿಡ್ ರೋಗಿಗಳ ಸಂಪರ್ಕಿತರನ್ನು ಪತ್ತೆ ಮಾಡಿ: ರಾಯಚೂರು ಎಸಿ ಸೂಚನೆ - Corona case in Raichur
ಕೊರೊನಾ ಕುರಿತಂತೆ ರಾಯಚೂರಿನಲ್ಲಿ ಸಹಾಯಕ ಆಯುಕ್ತ ಸಂತೋಷ ಕಾಮಗೌಡ ನೇತೃತ್ವದಲ್ಲಿ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಲಾಗಿದೆ.
ನಗರದ ಸಹಾಯುಕ್ತರ ಕಚೇರಿಯಲ್ಲಿ ಕೋವಿಡ್-19 ಸಂಪರ್ಕ ಪತ್ತೆ ಹಚ್ಚಿದ ಪ್ರಗತಿ ಕುರಿತು ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗದರ್ಶನದಲ್ಲಿ ಕೋವಿಡ್ ರೋಗಿಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಈ ಸಂಪರ್ಕ ಪತ್ತೆ ಕೆಲಸವನ್ನ ಈಗ ವಿಕೇಂದ್ರೀಕೃತವಾಗಿ ಮಾಡಿ ಎಲ್ಲಾ ಬೂತ್ ಮಟ್ಟದಲ್ಲಿ ಶಿಕ್ಷಕರನ್ನ ನೇಮಿಸಲಾಗಿದ್ದು, ಇಲ್ಲಿಯವರೆಗೂ ಪ್ರತಿಯೊಬ್ಬರು ಅದ್ಭುತವಾಗಿ ಕೆಲಸ ನಿರ್ವಹಿಸುತ್ತಾ ಬಂದಿದ್ದಾರೆ.
ಕೊರೊನಾ ರೋಗಿಯ ಬಗ್ಗೆ ಜನರಲ್ಲಿರುವ ಸಾಮಾಜಿಕ ಕಳಂಕದ ಭಾವವನ್ನು ಹೋಗಲಾಡಿಸಿ, ಈ ರೋಗದ ವಾಸ್ತವಿಕತೆಯ ಅರಿವನ್ನು ಮೂಡಿಸಲು ಸೂಚಿಸಲಾಯಿತು. ಜನರು ರೋಗಿಯ ಸಂಪರ್ಕಕ್ಕೆ ಬಂದರೂ ಸಹ ಸಾಮಾಜಿಕ ಕಳಂಕಕ್ಕೆ ಹೆದರಿ ತಪಾಸಣೆಗೆ ಸಹಕರಿಸದಿರುವ ಪ್ರಕರಣಗಳ ಕುರಿತು ಚರ್ಚಿಸಲಾಯಿತು.