ರಾಯಚೂರು:ಯುವತಿಯೊಬ್ಬಳ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಸಾಮೂಹಿಕವಾಗಿ ಮಾರಣಾಂತಿಕ ಹಲ್ಲೆ (people beaten man in raichur) ನಡೆಸಿರುವ ಘಟನೆ ಜಿಲ್ಲೆಯ ಕಿಲ್ಲಾರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಯುವತಿ ವಿಚಾರ: ವ್ಯಕ್ತಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಸಾಮೂಹಿಕ ಹಲ್ಲೆ..VIDEO - people attack on boy
ವ್ಯಕ್ತಿಯೊಬ್ಬನನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಸಾಮೂಹಿಕವಾಗಿ ಮಾರಣಾಂತಿಕ ಹಲ್ಲೆ (people beaten man in raichur) ನಡೆಸಿರುವ ಘಟನೆ ರಾಯಚೂರು ಜಿಲ್ಲೆಯ ಕಿಲ್ಲಾರಹಟ್ಟಿ ಗ್ರಾಮದಲ್ಲಿ ನಡೆದಿದ್ದು, ಹತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಮೇಲೆ ಸಾಮೂಹಿಕ ಹಲ್ಲೆ
ಬೈಲಪ್ಪ ಸಾಮೂಹಿಕ ಹಲ್ಲೆಗೊಳಗಾದ ವ್ಯಕ್ತಿ. ಯುವತಿಯೊಬ್ಬಳ ವಿಷಯಕ್ಕೆ ಈ ಅಮಾನವೀಯ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ಘಟನೆಗೆ ಸಂಬಂಧಿಸಿ ಸಾಮೂಹಿಕ ಹಲ್ಲೆ, ಕೊಲೆ ಯತ್ನ, ಸಾಮಾಜಿಕವಾಗಿ ಮಾನಭಂಗ ಸೇರಿದಂತೆ ಇತರ ಆರೋಪಗಳಡಿ ದುರುಗನಗೌಡ ಸೇರಿದಂತೆ ಹತ್ತು ಜನರ ವಿರುದ್ದ ಮುದಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ತಲೆ ಮರೆಸಿಕೊಂಡಿದ್ದು, ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು ಬೀಡು ಬಿಟ್ಟಿದ್ದು, ಕಟ್ಟೆಚ್ಚರ ವಹಿಸಿದ್ದಾರೆ.
Last Updated : Nov 16, 2021, 1:29 PM IST