ಕರ್ನಾಟಕ

karnataka

ETV Bharat / state

ಹೋಂ ಐಸೋಲೇಷನ್‌ನಲ್ಲಿ ಪ್ರತಾಪ್​ಗೌಡ: ಬಿಜೆಪಿ ನಾಯಕರಲ್ಲಿ ಆತಂಕ - ಮಸ್ಕಿ ಉಪಚುನಾವಣೆ

ಮಸ್ಕಿ ವಿಧಾನಸಭಾ ಉಪಚುನಾವಣೆಯ ಪ್ರಚಾರದಲ್ಲಿ ನಿರತರಾಗಿದ್ದ ಪ್ರತಾಪ್​​ಗೌಡ ಅವರಿಗೆ ಕೋವಿಡ್​​ ಸೋಂಕು ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ವೈದ್ಯರು ಹೋಂ​​ ಐಸೋಲೇಷನ್​ನಲ್ಲಿ ಇರುವಂತೆ ತಿಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಪ್ರತಾಪ್​ಗೌಡ
ಬಿಜೆಪಿ ಅಭ್ಯರ್ಥಿ ಪ್ರತಾಪ್​ಗೌಡ

By

Published : Apr 11, 2021, 7:05 PM IST

ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ ಅವರಿಗೆ ಕೊರೊನಾ ಸೋಂಕು ತಗುಲಿರುವ ಅನುಮಾನವಿದ್ದು ಅವರ ಗಂಟಲು ದ್ರವ ಸಂಗ್ರಹಿಸಲಾಗಿದೆ. ಕೋವಿಡ್‌ ವರದಿ ಬರುವವರೆಗೂ ಹೋಮ್ ಐಸೋಲೇಷನ್ ಇರುವಂತೆ ವೈದ್ಯರು ಸೂಚಿಸಿದ್ದು, ಅವರು ಮನೆಯಲ್ಲೇ ಪ್ರತ್ಯೇಕ ವಾಸವಾಗಿದ್ದಾರೆ.

ಆತಂಕ ಸೃಷ್ಟಿಸಿದ ಕೊರೊನಾ

ಇದೇ ವೇಳೆ, ಮಸ್ಕಿ ಉಪಚುನಾವಣೆ ಪ್ರಚಾರ ಬಿರುಸಿನಿಂದ ನಡೆಯುತ್ತಿದೆ. ಹಲವು ಸಚಿವರು, ಮುಖಂಡರು, ಪ್ರತಾಪ್‌ಗೌಡ ಅವರನ್ನು ಭೇಟಿ ಮಾಡಿದ್ದಾರೆ. ನಿನ್ನೆಯಿಂದ ಸಿಎಂ ಬಿ.ಎಸ್.ಯಡಿಯೂರಪ್ಪ ಮುದಗಲ್ ಪಟ್ಟಣದಲ್ಲಿ ವಾಸ್ತವ್ಯ ಮಾಡಿ, ದಲಿತರ ಮನೆಯಲ್ಲಿ ಉಪಹಾರ ಸೇವಿಸಿ ಪ್ರಚಾರ ಆರಂಭಿಸಿದ್ದರು. ಇದಾದ ಬಳಿಕ ಉಜ್ಜನಿ ಜಗುದ್ಗುರು ಸ್ವಾಮೀಜಿ ಸಹ ಭೇಟಿ ಮಾಡಿದ್ದರು.

ಏ.10ಕ್ಕೆ ಜಗದ್ಗುರುಗಳು ತುರುವಿಹಾಳ, ಬಳಗಾನೂರು, ಸಂತೆಕಲ್ಲೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಪ್ರಚಾರ ಸಭೆ ನಡೆಸಿದ್ರು. ಈ‌ ವೇಳೆ ಪ್ರತಾಪ್‌ಗೌಡ ಪಾಟೀಲ್ ಸಹ ಭಾಗವಹಿಸಿದ್ದರು. ಇಂದು ಮುದಗಲ್ ಪಟ್ಟಣದಲ್ಲಿ ಬೆಳಿಗ್ಗೆಯಿಂದ ವೀರಶೈವ-ಲಿಂಗಾಯತ, ವಾಲ್ಮೀಕಿ, ಹಾಲುಮತ ಸಮುದಾಯದ ಸೇರಿದಂತೆ ನಾನಾ ಸಮುದಾಯದಗಳ ಮುಖಂಡರ ನಿರಂತರ ಸಭೆ ನಡೆಸಿದರು.

ABOUT THE AUTHOR

...view details