ಕರ್ನಾಟಕ

karnataka

ETV Bharat / state

ಜೋರಾದ ಬೈ ಎಲೆಕ್ಷನ್ ಅಬ್ಬರ : ಮಸ್ಕಿಯಲ್ಲಿ ಬಿಜೆಪಿ ಪ್ರಚಾರಕ್ಕೆ ಸಿದ್ಧತೆ

ಈಗಾಗಲೇ ಮಸ್ಕಿ ಪಟ್ಟಣದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಹತ್ತಿರ ವೇದಿಕೆ ಸಿದ್ದಗೊಂಡಿದ್ದು, ಸಂಜೆ ಸಿಎಂ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಸಮಾವೇಶದಲ್ಲಿ ಸರಿಸುಮಾರು 30 ಸಾವಿರ‌ ಜನ ಸೇರುವ ನಿರೀಕ್ಷೆ ಇದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

maski-by-election-bjp-campaign
ಮಸ್ಕಿಯಲ್ಲಿ ಬಿಜೆಪಿ ಪ್ರಚಾರಕ್ಕೆ ಸಿದ್ಧತೆ

By

Published : Mar 20, 2021, 1:43 PM IST

ರಾಯಚೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆತಂಕ ಶುರುವಾಗಿದೆ. ಈ ಆತಂಕದ ನಡುವೆಯೂ ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವ ಸಂಪುಟದ ಸಚಿವರು, ಶಾಸಕರು, ಮುಖಂಡರು ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಬೈ ಎಲೆಕ್ಷನ್ ಪ್ರಚಾರ ನಡೆಸಲಿದ್ದಾರೆ.

ಮಸ್ಕಿಯಲ್ಲಿ ಬಿಜೆಪಿ ಪ್ರಚಾರಕ್ಕೆ ಸಿದ್ಧತೆ

ಈಗಾಗಲೇ ಮಸ್ಕಿ ಪಟ್ಟಣದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಹತ್ತಿರ ವೇದಿಕೆ ಸಿದ್ದಗೊಂಡಿದ್ದು, ಸಂಜೆ ಸಿಎಂ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಸಮಾವೇಶದಲ್ಲಿ ಸರಿಸುಮಾರು 30 ಸಾವಿರ‌ ಜನ ಸೇರುವ ನಿರೀಕ್ಷೆ ಇದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ. ಆದರೆ ಕೊರೊನಾ ಸೋಂಕಿನ ಭೀತಿಯಲ್ಲಿ ಇಷ್ಟು ಪ್ರಮಾಣದ ಜನ‌ ಸಮೂಹ ಸೇರುತ್ತಿದ್ದು, ಕೊರೊನಾ ನಿಯಮ ಪಾಲನೆಯಾಗುತ್ತವಾ ಎನ್ನುವ ಅನುಮಾನ ಎದುರಾಗಿದೆ.

ಓದಿ : ಆರ್​ಎಸ್​​ಎಸ್​ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ನೇಮಕ

ಕಡ್ಡಾಯವಾಗಿ ಕೊರೊನಾ ನಿಯಮಗಳನ್ನು ಪಾಲನೆ ಮಾಡಬೇಕೆಂದು ಸರ್ಕಾರವೇ ಸೂಚಿಸಿದ್ದು, ಸಮಾವೇಶದಲ್ಲಿ ನಿಯಮ ಪಾಲನೆ ಮಾಡುತ್ತಾರೆಯೇ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ABOUT THE AUTHOR

...view details