ಕರ್ನಾಟಕ

karnataka

ETV Bharat / state

ಜು. 2ರಿಂದ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ದರ್ಶನಕ್ಕೆ ಅವಕಾಶ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಯಮಾನುಸಾರ ಜು. 2ರಿಂದ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

Raichur
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ದರ್ಶನಕ್ಕೆ ಅವಕಾಶ

By

Published : Jun 29, 2020, 8:45 AM IST

ರಾಯಚೂರು:ಲಾಕ್​​​ಡೌನ್ ಹಿನ್ನೆಲೆ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ದರ್ಶನಕ್ಕೆ ಕಳೆದ 90 ದಿನಗಳಿಂದ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಯಮಾನುಸಾರ 2020 ಜು. 2ರಿಂದ ರಾಯರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಜು. 2ರಿಂದ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ದರ್ಶನಕ್ಕೆ ಅವಕಾಶ

ದರ್ಶನಕ್ಕೆ ಬರುವವರಿಗೆ ಕೊರೊನಾ ಭೀತಿ ಹಿನ್ನೆಲೆ ಸರ್ಕಾರ ನಿಯಮಗಳ ಅನುಸಾರ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗಿದೆ. ದರ್ಶನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ನಂಬರ್ ನೀಡಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪ್ರವೇಶ ದ್ವಾರದಲ್ಲಿ ಭಕ್ತರು ತಮ್ಮ ಕೈ - ಕಾಲುಗಳನ್ನ ಸ್ವಚ್ಚವಾಗಿ ತೊಳದುಕೊಂಡು, ಥರ್ಮಲ್ ಸ್ಕ್ಯಾನ್ ಒಳಪಟ್ಟ ನಂತರ, ಕೊರೊನಾ ಲಕ್ಷಣ ಕಂಡು ಬಂದಿಲ್ಲದವರೆಗೆ ಮಾತ್ರ ದರ್ಶನಕ್ಕೆ ಅವಕಾಶ. 65 ವರ್ಷ ಮೇಲ್ಪಟ್ಟ, 10 ವರ್ಷದೊಳಗಿನವರಿಗೆ, ಗರ್ಭೀಣಿಯರಿಗೆ ಹಾಗೂ ವಯೋ ಸಂಬಂಧಿಸಿದ ಕಾಯಿಲೆ ಉಳ್ಳವರಿಗೆ ಹಾಗೂ ಕಂಟೇನ್​ಮೆಂಟ್​ ಝೋನ್​ನಿಂದ ಬಂದವರಿಗೆ ಪ್ರವೇಶವಿಲ್ಲ.

ಮಠಕ್ಕೆ ಬರುವ ಎಲ್ಲ ಭಕ್ತರಿಗೆ ಸ್ಯಾನಿಟೈಸರ್ ಒದಗಿಸಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಂಡು ಭಕ್ತರಿಗೆ ರಾಯರ ದರ್ಶನ ಪಡೆಯಲು ಅವಕಾಶ ಒದಗಿಸಲಾಗುವುದು ಎಂದು ಶ್ರೀಮಠ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details