ಕರ್ನಾಟಕ

karnataka

ರಾಯರ ಮಠದಲ್ಲಿ ಪಾನಿಪೂರಿಗೆ ಬೇಡಿಕೆಯಿಟ್ಟ ವಿದ್ಯಾರ್ಥಿ.. ಮಂತ್ರಾಲಯದ ಶ್ರೀಗಳು ಏನ್​ ಮಾಡಿದ್ರು ಗೊತ್ತಾ?

By

Published : Sep 28, 2020, 4:05 PM IST

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀಸುಬುದೇಂಧ್ರ ತೀರ್ಥರು, ವಿದ್ಯಾಪೀಠದಲ್ಲಿ ಅಭ್ಯಾಸ ಮಾಡುವ ಸುಮಾರು 200 ವಿದ್ಯಾರ್ಥಿಗಳಿಗೆ ಪಾನಿಪೂರಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

A student demanded a panipuri in Mantralaya
ರಾಯರ ಮಠದಲ್ಲಿ ಪಾನಿಪೂರಿಗೆ ಬೇಡಿಕೆಯಿಟ್ಟ ವಿದ್ಯಾರ್ಥಿ

ರಾಯಚೂರು: ಮಂತ್ರಾಲಯದ ಶ್ರೀ ಶ್ರೀರಾಘವೇಂದ್ರ ಸ್ವಾಮಿ ಮಠದ ವಿದ್ಯಾಪೀಠದ ಬಾಲಕನೊಬ್ಬ ಊಟಕ್ಕೆ ಕುಳಿತಿದ್ದ ವೇಳೆ 'ನಂಗೆ ತಿನ್ನೋಕೆ ಪಾನಿಪೂರಿ ಬೇಕು' ಎಂದು ನೇರವಾಗಿ ಪೀಠಾಧಿಪತಿ ಶ್ರೀಸುಬುದೇಂಧ್ರ ತೀರ್ಥರಿಗೆ ಬೇಡಿಕೆಯಿಟ್ಟಿದ್ದಾನೆ.

ರಾಯರ ಮಠದಲ್ಲಿ ಪಾನಿಪೂರಿಗೆ ಬೇಡಿಕೆಯಿಟ್ಟ ವಿದ್ಯಾರ್ಥಿ

ಮಠದ ಶ್ರೀಗುರುಸೌರ್ವಭೌಮ ಸಂಸ್ಕೃತಿ ವಿದ್ಯಾಪೀಠದ ವಿದ್ಯಾರ್ಥಿಗಳು ಊಟ ಮಾಡುವ ಸಮಯದಲ್ಲಿ ತೆರಳಿದ ಪೀಠಾಧಿಪತಿಗಳು ಮಕ್ಕಳ ಯೋಗಕ್ಷೇಮ ವಿಚಾರಿಸುತ್ತಿದ್ದರು. ಈ ವೇಳೆ ಹೈದರಾಬಾದ್ ಮೂಲದ ಬಾಲಕನೊಬ್ಬ ನನಗೆ ತಿನ್ನಲು ಪಾನಿಪೂರಿ ಬೇಕೆಂದು ಶ್ರೀಗಳಿಗೆ ನೇರವಾಗಿ ಬೇಡಿಕೆಯಿಟ್ಟಿದ್ದಾನೆ. ಆಗ ಪೀಠಾಧಿಪತಿಗಳು, ಬಾಲಕನ ಆಸೆಗೆ ಸ್ಪಂದಿಸುವ ಮೂಲಕ ಅಡುಗೆ ತಯಾರಿಕರಿಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ.

ಬಾಲಕನ ಕೋರಿಕೆಯಂತೆ ಪಾನಿಪೂರಿ ಮಾಡಿಸಿ, ಬಾಲಕನ ಜೊತೆಗೆ ವಿದ್ಯಾಪೀಠದಲ್ಲಿ ಅಭ್ಯಾಸ ಮಾಡುವ ಸುಮಾರು 200 ವಿದ್ಯಾರ್ಥಿಗಳಿಗೆ ಪಾನಿಪೂರಿ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಬಾಲಕ ಸೇರಿದಂತೆ ಅಲ್ಲಿನ ವಿದ್ಯಾರ್ಥಿಗಳು ಸಂತಸಗೊಂಡಿದ್ದಾರೆ.

ABOUT THE AUTHOR

...view details