ರಾಯಚೂರು: ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರ ನಿಧನಕ್ಕೆ ಮಂತ್ರಾಲಯದ ಶ್ರೀರಾಘವೇಂದ್ರ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಸಂತಾಪ ಸೂಚಿಸಿದ್ದಾರೆ.
ಪೇಜಾವರ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ ಮಂತ್ರಾಲಯ ಶ್ರೀಗಳು - mantrala shre talk
ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರ ನಿಧನಕ್ಕೆ ಮಂತ್ರಾಲಯದ ಶ್ರೀರಾಘವೇಂದ್ರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸಂತಾಪ ಸೂಚಿಸಿದ್ದಾರೆ.
![ಪೇಜಾವರ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ ಮಂತ್ರಾಲಯ ಶ್ರೀಗಳು Mantralaya Shree](https://etvbharatimages.akamaized.net/etvbharat/prod-images/768-512-5528466-thumbnail-3x2-dr.jpg)
ಮಂತ್ರಾಲಯದ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀಗಳ ಅಗಲಿಕೆಯಿಂದ ಮನಸ್ಸಿಗೆ ನೋವುಂಟಾಗಿದೆ. ಪೇಜಾವರ ಶ್ರೀಗಳು, ದೇಶದೆಲ್ಲೆಡೆ ಸನಾತನ ಹಿಂದೂ ಧರ್ಮ ಹಾಗೂ ಮಧ್ವಾಚಾರ್ಯ ತತ್ವದ ಜ್ಞಾನವನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಿಸಿದವರು. ಕಳೆದ 8 ದಶಕಗಳಿಗಿಂತ ಅಧಿಕ ಕಾಲ ಸನ್ಯಾಸ ಜೀವನ ನಡೆಸುವ ಮೂಲಕ ವಯೋ ವೃದ್ಧರಾದವರು ಎಂದು ಸ್ಮರಿಸಿದ್ರು.
ಪೇಜಾವರ ಶ್ರೀಗಳು ಅನೇಕ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿ, ದೀನ ದಲಿತರ ಏಳಿಗೆಗೆ ಶ್ರಮಿಸಿದ್ದರು. ವಿಶೇಷವಾಗಿ ಶ್ರೀರಾಘವೇಂದ್ರ ಮಠದ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು. ಮಾತ್ರವಲ್ಲದೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು.