ಕರ್ನಾಟಕ

karnataka

ETV Bharat / state

ಆಗಸ್ಟ್​​ 21ರಿಂದ ಮಂತ್ರಾಲಯ ಗುರು ರಾಯರ ಆರಾಧನಾ ಮಹೋತ್ಸವ - ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ

ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವವು ಆಗಸ್ಟ್​​ 21ರಿಂದ ನಡೆಯಲಿದೆ.

mantralaya-raghavendra-swamy-aradhana-mahotsava-from-august-21
ಆಗಷ್ಟ್ 21ರಿಂದ ಮಂತ್ರಾಲಯ ಗುರು ರಾಯರ ಆರಾಧನಾ ಮಹೋತ್ಸವ

By

Published : Aug 19, 2021, 5:34 PM IST

Updated : Aug 19, 2021, 8:48 PM IST

ರಾಯಚೂರು:ಮಂತ್ರಾಲಯದಲ್ಲಿ ಗುರು ರಾಯರ 350ನೇ ಆರಾಧನಾ ಮಹೋತ್ಸವವು ಆಗಸ್ಟ್​​ 21ರಿಂದ 27ರವರೆಗೆ ನಡೆಯಲಿದೆ. ಆರಾಧನಾ ಸಮಯದಲ್ಲಿ ಕೇಂದ್ರ ಹಾಗೂ ಆಂಧ್ರ ಸರ್ಕಾರಗಳ ಕೋವಿಡ್ ನಿಯಮಗಳನ್ನು ಅನುಸರಿಸಲಾಗುವುದು ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್​​​ 21ರಂದು ಧ್ವಜಾರೋಹಣದ ಮೂಲಕ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಇದಾದ ಬಳಿಕ 23ರಂದು ಪೂರ್ವಾರಾಧನೆ, 24 ಮಧ್ಯಾರಾಧನೆ, 25ರಂದು ಉತ್ತಾರಾಧನೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಕೋವಿಡ್​ ನಿಯಮ ಪಾಲನೆ:

ಮಹೋತ್ಸವದ ವೇಳೆ ಶ್ರೀಮಠಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಪಾಡುವುದು ಸೇರಿ ಕೊರೊನಾ ನಿಯಮ ಪಾಲನೆ ಮಾಡಲಾಗುತ್ತಿದೆ. ಈ ಬಗ್ಗೆ ಶ್ರೀಮಠದಲ್ಲಿ ಭಕ್ತರಿಗೆ ಎಚ್ಚರಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀಗಳು ತಿಳಿಸಿದ್ದಾರೆ.

ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಮಾಹಿತಿ

ಆರಾಧನೆ ಹಿನ್ನೆಲೆ ಮಠದ ಆವರಣದಲ್ಲಿ ಆ್ಯಂಬುಲೆನ್ಸ್ ಹಾಗೂ ಕ್ಲಿನಿಕ್ ತೆರೆಯಲಾಗುವುದು. ನದಿಯಲ್ಲಿ ಸ್ನಾನ ಮಾಡುವುದಕ್ಕೆ, ವಾಹನಗಳ ನಿಲುಗಡೆ ಸೇರಿದಂತೆ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸುವ ಜೊತೆಗೆ ಪರಿಮಳ ಪ್ರಸಾದಕ್ಕಾಗಿ ಹೆಚ್ಚಿನ ಕೌಂಟರ್​ಗಳನ್ನು​​ ತೆರೆಯಲಾಗುವುದು ಎಂದರು.

ಅಲ್ಲದೇ, ಮಂತ್ರಾಲಯದ ಅಭಿವೃದ್ಧಿಗಾಗಿ ಮ್ಯೂಸಿಯಂ, ನೂತನ ಭೋಜನ ಕೋಣೆಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನೂ ಹತ್ತಾರು ಕಾರ್ಯಕ್ರಮಗಳನ್ನ ಭಕ್ತರ ಸಹಾಯದಿಂದ ನಡೆಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ:ಬಳ್ಳಾರಿಗೆ ’ಗಾಲಿ’ ಹೋಗಬಹುದು: ಜನಾರ್ದನ ರೆಡ್ಡಿಗೆ ಕೊನೆಗೂ ಸಿಕ್ತು ಸುಪ್ರೀಂ ಪರ್ಮಿಷನ್​..!

Last Updated : Aug 19, 2021, 8:48 PM IST

ABOUT THE AUTHOR

...view details