ರಾಯಚೂರು:ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಹುಂಡಿಯಲ್ಲಿ ಕೋಟ್ಯಂತರ ರೂಪಾಯಿ ಕಾಣಿಕೆ ಸಲ್ಲಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ಹುಂಡಿಯಲ್ಲಿ ಬರೊಬ್ಬರಿ 2.78 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. ಇದರಲ್ಲಿ 2.72 ಕೋಟಿ ರೂಪಾಯಿ ವಿವಿಧ ಮುಖಬೆಲೆಯ ನೋಟುಗಳು ಹಾಗೂ 5.89 ಲಕ್ಷ ರೂಪಾಯಿ ಮೌಲ್ಯದ ನಾಣ್ಯಗಳು ಹುಂಡಿಯಲ್ಲಿ ಸಂಗ್ರಹವಾಗಿದೆ.
ಮಂತ್ರಾಲಯ ಮಠ ಕಾಣಿಕೆ ಹುಂಡಿ ಎಣಿಕೆ.. 2.78 ಕೋಟಿ ರೂ. ಹಣ ಸಂಗ್ರಹ - ನೋಟಿನ ಹಾರ
ಕಾಣಿಕೆ ಎಣಿಕೆ ಸಮಯದಲ್ಲಿ ಭಕ್ತರು ಒಬ್ಬರು ₹10 ರೂಪಾಯಿ ಮೌಲ್ಯದ ನೋಟಿನ ಹಾರ ವಿಶೇಷವಾಗಿ ಗಮನ ಸೆಳೆಯಿತು. ಕಾಣಿಕೆ ಜತೆಯಲ್ಲಿ ಬಂಗಾರ ಹಾಗೂ ಬೆಳ್ಳಿಯನ್ನು ಕಾಣಿಕೆಯಾಗಿ ಸಲ್ಲಿಸಿದ್ದಾರೆ.
ಆಗಷ್ಟ್ ತಿಂಗಳಲ್ಲಿ ರಾಯರ 351ನೇ ಆರಾಧನಾ ಮಹೋತ್ಸವ ಅದ್ದೂರಿಯಾಗಿ ನಡೆದಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತರು ಶ್ರೀಮಠಕ್ಕೆ ಆಗಮಿಸಿದ್ದರು. ಅಲ್ಲದೇ ಕಾಣಿಕೆ ಎಣಿಕೆ ಸಮಯದಲ್ಲಿ ಭಕ್ತರು ಒಬ್ಬರು ₹10 ರೂಪಾಯಿ ಮೌಲ್ಯದ ನೋಟಿನ ಹಾರ ವಿಶೇಷವಾಗಿ ಗಮನ ಸೆಳೆಯಿತು. ಕಾಣಿಕೆ ಜತೆಯಲ್ಲಿ ಬಂಗಾರ ಹಾಗೂ ಬೆಳ್ಳಿಯನ್ನು ಕಾಣಿಕೆಯಾಗಿ ಸಲ್ಲಿಸಿದ್ದಾರೆ. 65 ಗ್ರಾಂ ಬಂಗಾರ ಹಾಗೂ 1150 ಗ್ರಾಂ ಬೆಳ್ಳಿಯ ಆಭರಣಗಳು ಭಕ್ತರು ರಾಯರಿಗೆ ಕಾಣಿಕೆ ರೂಪದಲ್ಲಿ ಸಲ್ಲಿಸಿದ್ದಾರೆ. ಈ ವೇಳೆ ಶ್ರೀಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸ ರಾವ್ ಇದ್ದರು.
ಇದನ್ನೂ ಓದಿ:ಅಂಜನಾದ್ರಿಯ ಹನುಮನ ಬೆಟ್ಟದಲ್ಲಿನ ಹತ್ತೂ ಕಾಣಿಕೆ ಹುಂಡಿ ಭರ್ತಿ