ಕರ್ನಾಟಕ

karnataka

ETV Bharat / state

ಮಂಗಳೂರಲ್ಲಿ SDPI PFI ಕಾರ್ಯಕರ್ತರ ಮನೆ ಮೇಲೆ ದಾಳಿ: ಐವರು ವಶಕ್ಕೆ - ನಿಷೇಧಿತ PFI

ನಿಷೇಧಿತ PFI ಮತ್ತು SDPI ಕಾರ್ಯಕರ್ತರ ಮೇಲೆ ಮಂಗಳೂರು ಪೊಲೀಸರು ದಾಳಿ ಮಾಡಿದ್ದಾರೆ.

ಮಂಗಳೂರಲ್ಲಿ SDPI PFI ಕಾರ್ಯಕರ್ತರ ಮನೆ ಮೇಲೆ ದಾ
ಮಂಗಳೂರಲ್ಲಿ SDPI PFI ಕಾರ್ಯಕರ್ತರ ಮನೆ ಮೇಲೆ ದಾ

By

Published : Oct 13, 2022, 9:40 AM IST

ಮಂಗಳೂರು: ಮಂಗಳೂರಲ್ಲಿ SDPI ಮತ್ತು ನಿಷೇಧಿತ PFI ಕಾರ್ಯಕರ್ತರ ಮನೆ ಮೇಲೆ ನಗರ ಪೊಲೀಸರು ದಾಳಿ ಮಾಡಿ, ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪಿಎಫ್​​ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಬಳಿಕ ನಡೆದ ಮೊದಲ ದಾಳಿ ಇದಾಗಿದೆ.

ಮಂಗಳೂರಿನ ಪಣಂಬೂರು, ಸುರತ್ಕಲ್, ಉಳ್ಳಾಲ, ಮಂಗಳೂರು ಗ್ರಾಮಾಂತರ ಸೇರಿ ಹಲವೆಡೆ ಮುಖಂಡರು, ಕಾರ್ಯಕರ್ತರ ಮನೆಗಳ ಮೇಲೆ ಇಂದು ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಪಿಎಫ್​ಐನ ಐವರು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. UAPA Act, ಸೆಕ್ಷನ್ 121 ಸೇರಿ ವಿವಿಧ ಐಪಿಸಿ ಸೆಕ್ಷೆನ್ ಅಡಿ ಕೇಸ್ ದಾಖಲಿಸಲಾಗಿದೆ.

ಪಿಎಫ್ಐ ನಿಷೇಧಕ್ಕೆ ಮುನ್ನ ಎನ್ ಐ ಎ ಮತ್ತು ರಾಜ್ಯ ಪೊಲೀಸರು ಪಿಎಫ್ಐ ಮತ್ತು ಎಸ್ ಡಿ ಪಿ ಐ ಕಚೇರಿ ಮತ್ತು ಮುಖಂಡರುಗಳ ಮೇಲೆ ದಾಳಿ ನಡೆಸಿದ್ದರು.

(ಓದಿ: ಪಿಎಫ್ಐ ಮರಳಿ ಬರುತ್ತೇವೆ.. ಬ್ಯಾನ್​ ಬೆನ್ನಲ್ಲೇ ರಸ್ತೆಯ ಮೇಲೆ ಬಂಟ್ವಾಳದಲ್ಲಿ ಬೆದರಿಕೆ ಸಂದೇಶ)

ABOUT THE AUTHOR

...view details