ಕರ್ನಾಟಕ

karnataka

ETV Bharat / state

ರಾಯಚೂರು: ಮೈಗೆ ಕೆಸರು ಸಿಡಿದಿದ್ದಕ್ಕೆ ಕೆಎಸ್​ಆರ್​ಟಿಸಿ ಬಸ್ ಚಾಲಕನಿಗೆ ಚಪ್ಪಲಿಯಿಂದ ಥಳಿತ - ಮೈ ಮೇಲೆ ಕೆಸರು ಹಾರಿಸಿದ್ದಕ್ಕೆ ಕೆಎಸ್​ಆರ್​ಟಿಸಿ ಬಸ್ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ

ಬಸ್ ಚಾಲಕ ಕೆಸರಿದ್ದ ರಸ್ತೆ ಮೇಲೆ ಬಸ್ ಚಲಾಯಿಸಿದ ವೇಳೆ ಅಲ್ಲೇ ಇದ್ದ ಗೌಡ ಎಂಬುವವರ ಮೇಲೆ ಕೆಸರು ಸಿಡಿದಿದೆ. ಇದರಿಂದ ಸಿಟ್ಟಿಗೆದ್ದ ಗೌಡ, ಕೆಸರಿನ ಮೇಲೆ ಬಸ್ ಚಲಾಯಿಸಿದ್ದಕ್ಕೆ ಕೆಸರು ತನ್ನ ಬಟ್ಟೆಗೆಲ್ಲಾ ಮೆತ್ತಿದೆ ಎಂದು ಗಲಾಟೆ ಮಾಡಿದ್ದಾರೆ.

Bus driver of KSRTC attacked for dabble on mud
ಚಾಲಕನ ಮೇಲೆ ಹಲ್ಲೆ

By

Published : May 1, 2022, 5:30 PM IST

ರಾಯಚೂರು:ಕೆಎಸ್​ಆರ್​ಟಿಸಿ ಬಸ್​ ಚಾಲಕ ಕೆಸರು ಸಿಡಿಸಿದ್ದಾನೆ ಎಂದು ಚಪ್ಪಲಿಯಲ್ಲಿ ಹೊಡೆದ ಘಟನೆಪರಸಾಪುರ ಗ್ರಾಮದಲ್ಲಿ ನಡೆದಿದೆ. ರಾಯಚರು ಜಿಲ್ಲೆಯ ಮಸ್ಕಿ ತಾಲೂಕಿನ ಪರಸಾಪುರ ಬಳಿ ಬಸ್ ಚಾಲಕ ಕೆಸರಿದ್ದ ರಸ್ತೆ ಮೇಲೆ ಬಸ್ ಚಲಾಯಿಸಿದ ವೇಳೆ ಅಲ್ಲೇ ಇದ್ದ ಗೌಡ ಎಂಬುವವರ ಮೇಲೆ ಕೆಸರು ಹಾರಿದೆ. ಇದರಿಂದ ಸಿಟ್ಟಿಗೆದ್ದ ಗೌಡ, ಕೆಸರಿನ ಮೇಲೆ ಬಸ್ ಚಲಾಯಿಸಿದ್ದಕ್ಕೆ ಕೆಸರು ತನ್ನ ಬಟ್ಟೆಗೆಲ್ಲಾ ಮೆತ್ತಿದೆ ಎಂದು ಗಲಾಟೆ ಮಾಡಿದ್ದಾನೆ.

ಮೈ ಮೇಲೆ ಕೆಸರು ಹಾರಿಸಿದ್ದಕ್ಕೆ ಕೆಎಸ್​ಆರ್​ಟಿಸಿ ಬಸ್ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ

ಮಾತಿಗೆ ಮಾತು ಬೆಳೆದು ಗೌಡ ತನ್ನ ಚಪ್ಪಲಿಯಿಂದ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ರಾಯಚೂರು ವಿಭಾಗದ ಮಸ್ಕಿ ಘಟಕದ ಬಸ್ ಇದಾಗಿದ್ದು, ಸಾರ್ವಜನಿಕರ ಎದುರೇ ಚಪ್ಪಲಿಯಿಂದ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆ ಮಸ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ಇದನ್ನೂ ಓದಿ:ಕುಟುಂಬ ರಾಜಕಾರಣಕ್ಕೆ ಗುಡ್ ಬೈ ಅಂದ್ರಾ ಸಂತೋಷ್: ಅಮಿತ್ ಶಾ ಟಾರ್ಗೆಟ್ ಏನು..?

For All Latest Updates

TAGGED:

ABOUT THE AUTHOR

...view details