ಕರ್ನಾಟಕ

karnataka

ETV Bharat / state

ಸೈನ್ಯಕ್ಕೆ ಸೇರಿಸುವುದಾಗಿ ವಂಚಿಸಿ 3 ಲಕ್ಷ ದೋಚಿದ ಖದೀಮ - ರಾಯಚೂರು ಕ್ರೈಮ್​ ಲೆಟೆಸ್ಟ್ ನ್ಯೂಸ್

ಸೈನ್ಯದಲ್ಲಿ ಉದ್ಯೋಗ ಕೊಡಿಸುವುದಾಗಿ ಯುವಕರನ್ನು ವಂಚನೆ ಮಾಡಿ 3 ಲಕ್ಷ ರೂ ಪಡೆದು ವಂಚನೆ ಎಸಗಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ರಾಯಚೂರು
Raichur

By

Published : Nov 30, 2019, 12:31 PM IST

ರಾಯಚೂರು: ಸೈನ್ಯದಲ್ಲಿ ಉದ್ಯೋಗ ಕೊಡಿಸುವುದಾಗಿ ಯುವಕರನ್ನು ವಂಚಿಸಿರುವ ಪ್ರಕರಣವೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ನಾಲತವಾಡ ಮೂಲದ ಮಂಜುನಾಥ ರೆಡ್ಡಿ ಸೈನ್ಯದಲ್ಲಿ ಉದ್ಯೋಗ ಕೊಡಿಸುವುದಾಗಿ ಕುಪ್ಪಿಗುಡ್ಡ ಗ್ರಾಮದ ಅಂಬರೇಶ್, ಕರಡಕಲ್ ಗ್ರಾಮದ ಮಹೇಶ್ ಎನ್ನುವವರಿಂದ 3 ಲಕ್ಷ ರೂ. ಪಡೆದು ವಂಚನೆ ಎಸಗಿದ್ದಾನೆ. ಈ ಕುರಿತು ಮುದಗಲ್ ಠಾಣೆ ವಂಚನೆ ಪ್ರಕರಣ ದಾಖಲಾಗಿದೆ.

ಇದೇ ಮಾದರಿಯಲ್ಲಿ ಮಂಗಳೂರು ಜಿಲ್ಲೆಯ ಸೂರತ್ ಕಲ್​ನಲ್ಲಿಯು ವಂಚಿಸಿದ್ದು, ಪ್ರಕರಣ ದಾಖಲಾಗಿತ್ತು. ಸೂರತ್ ಕಲ್​ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಇದೇ ರೀತಿಯಲ್ಲಿ ಹಲವು ಕಡೆ ವಂಚನೆ ಮಾಡಿರುವ ಸಾಧ್ಯತೆಯಿದ್ದು, ವಂಚನೆಗೊಳಾದವರು ಸಂಬಂಧಿಸಿದ ಠಾಣೆ ವ್ಯಾಪ್ತಿಗೆ ದೂರು ದಾಖಲಿಸುವಂತೆ ಪೊಲೀಸ್ ಕೋರಿದ್ದಾರೆ.

ABOUT THE AUTHOR

...view details