ರಾಯಚೂರು: ಲಿಂಗಸುಗೂರು ತಾಲೂಕು ಗುಡದನಾಳ ಗ್ರಾಮದಲ್ಲಿ ರಾಜಕೀಯ ದ್ವೇಷದಿಂದ ಶರಣಬಸವ ಹೊಸಮನಿ (35) ಎಂಬಾತ ಕೊಲೆಯಾಗಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಜರುಗಿದೆ.
ಹೊನ್ನಳ್ಳಿ ಗ್ರಾಮ ಪಂಚಾಯತ್ಗೆ ಈಚೆಗೆ ಜರುಗಿದ ಚುನಾವಣೆಯಲ್ಲಿ ಶರಣಬಸವ ಹೊಸಮನಿ ತಾಯಿ ಹನುಮಂತಮ್ಮ ಹೊಸಮನಿ ಆಯ್ಕೆಯಾಗಿದ್ದರು. ಪ್ರತಿಸ್ಪರ್ಧಿ ಕುಟುಂಬಸ್ಥರು ಆಗಿನಿಂದಲೇ ರಾಜಕೀಯ ದ್ವೇಷ ಸಾಧಿಸುತ್ತ ಸೋಮವಾರ ರಾತ್ರಿ ಜಗಳ ತೆಗೆದು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆ ನಡೆಸಿ ಕೊಲೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.