ರಾಯಚೂರು: ಬೈಕ್ ಸವಾರನಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆಯೋದನ್ನು ತಪ್ಪಿಸಲು ಹೋಗಿ ಅನಾಹುತ: ಬೈಕ್ ಸವಾರನನ್ನು ಬಲಿಪಡೆದ ಲಾರಿ - Man killed in lorry accident at Raichuru
ನಂದೀಶ್ವರ ದೇವಾಲಯದ ತಿರುವಿನ ಬಳಿ ಟ್ರಾಕ್ಟರ್ ಅಡ್ಡಬಂದಿದೆ. ಇದೇ ಸಮಯಕ್ಕೆ ಬಂದ ಲಾರಿ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೈಕ್ ಸವಾರನಿಗೆ ಗುದ್ದಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
![ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆಯೋದನ್ನು ತಪ್ಪಿಸಲು ಹೋಗಿ ಅನಾಹುತ: ಬೈಕ್ ಸವಾರನನ್ನು ಬಲಿಪಡೆದ ಲಾರಿ ರಾಯಚೂರಲ್ಲಿ ಅಪಘಾತವಾಗಿ ವ್ಯಕ್ತಿ ಸಾವು , man-killed-in-lorry-accident](https://etvbharatimages.akamaized.net/etvbharat/prod-images/768-512-5570487-thumbnail-3x2-nin.jpg)
ನಗರದ ನಂದೀಶ್ವರ ದೇವಾಲಯದ ಬಳಿಯ ಹೆದ್ದಾರಿಯಲ್ಲಿ ಭೀಕರ ದುರ್ಘಟನೆ ಸಂಭವಿಸಿದೆ. ಮೃತ ಬೈಕ್ ಸವಾರನ್ನ ಐಡಿಎಂಎಸ್ ಲೇ ಔಟ್ ನಿವಾಸಿ ವೆಂಟಕೇಶ್(40) ಎಂದು ಗುರುತಿಸಲಾಗಿದೆ. ಜೆಸ್ಕಾಂನಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ವೆಂಕಟೇಶ್, ಎಂದಿನಂತೆ ಬೈಕ್ನಲ್ಲಿ ಕಚೇರಿಗೆ ತೆಳುತ್ತಿದ್ದ ವೇಳೆ ಈ ಅನಾಹುತ ನಡೆದಿದೆ.
ನಂದೀಶ್ವರ ದೇವಾಲಯದ ತಿರುವಿನ ಬಳಿ ಟ್ರಾಕ್ಟರ್ ಅಡ್ಡಬಂದಿದೆ. ಇದೇ ಸಮಯಕ್ಕೆ ಬಂದ ಲಾರಿ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೈಕ್ ಸವಾರನಿಗೆ ಗುದ್ದಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಗೆ ಕಾರಣವಾದ ಲಾರಿ ಚಾಲಕ ಹಾಗೂ ಟ್ರಾಕ್ಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆ. ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.