ಕರ್ನಾಟಕ

karnataka

ETV Bharat / state

ಭೀಕರ ರಸ್ತೆ ದುರಂತ: ತಂದೆ ಸ್ಥಳದಲ್ಲೇ ಸಾವು, ಮಗನಿಗೆ ಗಾಯ - ರಾಯಚೂರಲ್ಲಿ ಅಪಘಾತವಾಗಿ ವ್ಯಕ್ತಿ ಸಾವು

ತಂದೆ-ಮಗ ತೆರಳುತ್ತಿದ್ದ ಬೈಕ್​ಗೆ ಹಿಂಬದಿಯಿಂದ ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ತಂದೆ ಸಾವಿಗೀಡಾದರೆ ಮಗ ಗಾಯಗೊಂಡಿದ್ದಾನೆ.

ಭೀಕರ ರಸ್ತೆ ದುರಂತ: ತಂದೆ ಸ್ಥಳದಲ್ಲೇ ಸಾವು, ಮಗನಿಗೆ ಗಾಯ
ಭೀಕರ ರಸ್ತೆ ದುರಂತ: ತಂದೆ ಸ್ಥಳದಲ್ಲೇ ಸಾವು, ಮಗನಿಗೆ ಗಾಯ

By

Published : Jan 20, 2022, 10:47 PM IST

ರಾಯಚೂರು: ಭೀಕರ ರಸ್ತೆ ದುರಂತದಲ್ಲಿ ಬೈಕ್‌‌ನಲ್ಲಿದ್ದ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದು, ಮಗನಿಗೆ ಸಣ್ಣಪುಟ್ಟ ಗಾಯವಾಗಿರುವ ಘಟನೆ ವೈಟಿಪಿಎಸ್ ಹತ್ತಿರ ನಡೆದಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಗೂಡ್ಸ್ ಲಾರಿ ತಂದೆ-ಮಗ ತೆರಳುತ್ತಿದ್ದ ಬೈಕ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ಅನಾಹುತ ಜರುಗಿದೆ. ತಾಲೂಕಿನ ಯರಮರಸ್ ಹೊರವಲಯದ ವೈಟಿಪಿಎಸ್ ಬಳಿ ಸಂಜೆ ವೇಳೆ ದುರಂತ ಸಂಭವಿದೆ.

ಹೆಗ್ಗಸನ್ನಹಳ್ಳಿ ಗ್ರಾಮದ ಮಲ್ಲಪ್ಪ(35) ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ. ಗಾಯಗೊಂಡಿರುವ ಮಗನನ್ನ ಸ್ಥಳೀಯ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಘಟನೆಗೆ ಕಾರಣವಾದ ಲಾರಿ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ABOUT THE AUTHOR

...view details