ರಾಯಚೂರು: ನಾಲ್ವರು ದುರ್ಷ್ಕಮಿಗಳು ಪಿಸ್ತೂಲ್, ಚಾಕು ತೋರಿಸಿ ವ್ಯಕ್ತಿ ಅಪಹರಣ ಮಾಡಿರುವ ಘಟನೆ ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ನಡೆದಿದೆ.
ಲಿಂಗಸುಗೂರು ಕೇಂದ್ರ ಬಸ್ ನಿಲ್ದಾಣದ ಬಳಿ ಹಾಡುಹಗಲೇ ಒಬ್ಬ ವ್ಯಕ್ತಿಯನ್ನ ಸ್ನೇಹಿತರಂತೆ ಮಾತನಾಡಿಸಿ ಚಾಕು, ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ ಅಪಹರಿಸಿದ್ದಾರೆ. ಮಾರುತಿ ಸಿಯಾಜ್ ಕಾರಿನಲ್ಲಿ ನಾಲ್ವರು ದುಷ್ಕರ್ಮಿಗಳು ವ್ಯಕ್ತಿಯನ್ನು ಅಪರಿಸಿದ್ದಾರೆ. ವ್ಯಕ್ತಿಯನ್ನ ಅಪಹರಿಸುತ್ತಿದ್ದ ವೇಳೆ ತಡೆಯಲು ಮುಂದಾದ ಕೆಲ ಸ್ಥಳೀಯರ ಪ್ರಯತ್ನ ವಿಫಲವಾಗಿದೆ.