ಲಿಂಗಸುಗೂರು: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಪಘಾತದಿಂದ ತೀವ್ರ ಗಾಯಗೊಂಡು ದಾಖಲಾಗಿದ್ದ 30 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ಸಾವಿಗೆ ಕಾರಣ ಅಪಘಾತವೊ? ಕೊಲೆಯೊ? ಎಂಬ ಬಗ್ಗೆ ಸ್ಪಷ್ಟ ಮಾಹಿತಿ ತಿಳಿಯದೇ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಅಪಘಾತದಿಂದ ಗಾಯಗೊಂಡಿದ್ದವ ಆಸ್ಪತ್ರೆಯಲ್ಲಿ ಸಾವು: ಕೊಲೆ ಆರೋಪ - ಅಪಘಾತದಲ್ಲಿ ವ್ಯಕ್ತಿ ಸಾವು ಸುದ್ದಿ
ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈತನ ಸಂಬಂಧಿಕರು ಇದು ಅಪಘಾತವಲ್ಲ, ಪೂರ್ವನಿಯೋಜಿತ ಕೊಲೆ ಎಂದು ಆರೋಪಿಸಿದ್ದು, ಸದ್ಯ ಇದು ಅಪಘಾತವೊ? ಕೊಲೆಯೊ? ಎಂಬ ಗೊಂದಲ ಮೂಡಿದೆ.
ಯಾದಗಿರಿ ಜಿಲ್ಲೆ ಸುರಪುರ ತಾಲೂಕು ರಾಜೋಳ ತಾಂಡಾದ ಶಿವು ಸೋಮಲೆಪ್ಪ ನಾಯ್ಕ ಮೃತ ವ್ಯಕ್ತಿ. ಈತನ ಹೆಂಡತಿಯ ತವರು ಮನೆ ಗೊರೆಬಾಳತಾಂಡಾದಲ್ಲಿ ಈತ ಇರುತ್ತಿದ್ದ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಭಾನುವಾರ ಮಧ್ಯರಾತ್ರಿ ಸ್ನೇಹಿತರ ಜೊತೆ ಊಟ ಮಾಡಿ ಮರಳಿ ಹೋಗುವಾಗ ಗೋನವಾಟ್ಲ ತಾಂಡಾ ಬಳಿ ಅಪಘಾತವಾಗಿ ತೀವ್ರ ಗಾಯಗೊಂಡಿದ್ದಾನೆ. ತಕ್ಷಣವೇ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾಗಿ ಆಪ್ತ ಸ್ನೇಹಿತರು ತಿಳಿಸಿದ್ದಾರೆ. ಮೃತ ಕುಟುಂಬಸ್ಥರು ಇದೊಂದು ಕೊಲೆ. ಕೊಲೆ ಮಾಡಲು ರೂಪಿಸಿದ ವ್ಯವಸ್ಥಿತ ಸಂಚು ಎಂದು ಸಂಶಯ ವ್ಯಕ್ತ ಪಡಿಸಿದ್ದಾರೆ. ಲಿಂಗಸುಗೂರು ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.