ರಾಯಚೂರು:ಮಗನಿಗೆ ಈಜು ಕಲಿಸಲು ಹೋಗಿದ್ದ ತಂದೆ ನೀರು ಪಾಲಾಗಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ. ಜಿಲ್ಲೆಯ ಸಿರವಾರ ತಾಲೂಕಿನ ಅತ್ತನೂರು ಕ್ಯಾಂಪ್ನಲ್ಲಿ ಈ ಘಟನೆ 2 ದಿನಗಳ ಹಿಂದೆ ಸಂಭವಿಸಿದೆ. ಕೆ.ಲಿಂಗಣ್ಣ(38) ಮೃತ ವ್ಯಕ್ತಿ. ಬಿಸಿಲಿನ ಬೇಗೆ ಹಿನ್ನೆಲೆ ಗುರುವಾರದಂದು ಈಜಲು ಲಿಂಗಣ್ಣ ಮತ್ತು ಆತನ ಮಗ ಊರಿನ ಕೆರೆಗೆ ತೆರಳಿದ್ದರು.
ರಾಯಚೂರು: ಮಗನಿಗೆ ಈಜು ಕಲಿಸಲು ಹೋದ ತಂದೆ ನೀರುಪಾಲು
ಬೇಸಿಗೆ ಇದ್ದ ಕಾರಣ ಮಗನಿಗೆ ಈಜಲು ಕಲಿಸಲು ಕೆರೆಗೆ ಇಳಿದಿದ್ದಾಗ ತಂದೆ ಮುಳುಗಿ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನಲ್ಲಿ ನಡೆದಿದೆ.
ತಂದೆ ನೀರುಪಾಲು
ಲಿಂಗಣ್ಣ ಅವರು ಮಗನಿಗೆ ಈಜು ಕಲಿಸಿದ ಬಳಿಕ ಆತನನ್ನು ದಡದಲ್ಲಿ ಬಿಟ್ಟು ತಾವು ನೀರಿಗೆ ಧುಮುಕಿದ್ದಾರೆ. ಈ ವೇಳೆ, ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿದ ಬಳಿಕ ಅಗ್ನಿಶಾಮಕ ಸಿಬ್ಬಂದಿ ಲಿಂಗಣ್ಣ ಅವರ ಮೃತ ದೇಹಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದರು. 2 ದಿನಗಳ ಬಳಿಕ ಇಂದು ಕೆರೆಯಲ್ಲಿ ಶವ ತೇಲಿ ಬಂದಿದೆ. ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ:ಅಂತರ್ಜಾತಿ ವಿವಾಹ: ಪತಿ ಜೊತೆ ವಾಸವಿದ್ದ ಯುವತಿಯನ್ನ ಎಳೆದೊಯ್ದ ಕುಟುಂಬಸ್ಥರು!