ಕರ್ನಾಟಕ

karnataka

ETV Bharat / state

ನಕಲಿ ಇಮೇಲ್ ಸೃಷ್ಟಿಸಿ ಯುವತಿಯ ರಾಜೀನಾಮೆ ಸಲ್ಲಿಸಿದ್ದ ಖತರ್ನಾಕ್​ ಮ್ಯಾನೇಜರ್​ ಸೆರೆ - ಸಿಇಎನ್ ಅಪರಾಧ ಠಾಣಾಧಿಕಾರಿ

ರಾಯಚೂರಿನಲ್ಲಿ ನಕಲಿ ಇಮೇಲ್ ಸೃಷ್ಟಿಸಿ ಲೈಂಗಿಕ ಕಿರುಕುಳ, ಅಸಭ್ಯ ವರ್ತನೆ ಹಾಗೂ ಮಾನಸಿಕ ಕಿರುಕುಳ ನೀಡುತಿದ್ದ ಆರೋಪಿಯನ್ನು ಪೋಲೀಸರು ಬಂಧಿಸಿ ಯಶಸ್ವಿಯಾಗಿದ್ದಾರೆ.

ಆರೋಪಿ

By

Published : Aug 14, 2019, 6:52 PM IST

ರಾಯಚೂರು: ನಕಲಿ ಇಮೇಲ್ ಸೃಷ್ಟಿಸಿ ಲೈಂಗಿಕ ಕಿರುಕುಳ, ಅಸಭ್ಯ ವರ್ತನೆ ಹಾಗೂ ಮಾನಸಿಕ ಕಿರುಕುಳ ನೀಡುತಿದ್ದ ಆರೋಪಿಯನ್ನು ಪೋಲೀಸರು ಬಂಧಿಸಿ ಯಶಸ್ವಿಯಾಗಿದ್ದಾರೆ.

ಜಿಲ್ಲೆಯ ಸಿಇಎನ್ ಅಪರಾಧ ಪೊಲೀಸ್ ಠಾಣಾ ವ್ಯಾಪ್ತಿಯ ಜವಳಗೇರಾ ಸೀಮಾಂತರದ ನ್ಯಾಶನಲ್ ಸೀಡ್ಸ್ ಕಾರ್ಪೋರೇಶನ್ ಲಿ.ಬ್ರಾಂಚ್ ಸೆಂಟ್ರಲ್ ನ್ಯಾಶನಲ್ ಸೀಡ್ಸ್ ಸ್ಟೇಟ್ ಫಾರ್ಮ್ ನಲ್ಲಿ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಪೆರವಲಿ ಶ್ರೀ ಗೌರಿ ಅವರ ಹೆಸರಿನಲ್ಲಿ ನಕಲಿ ಇ ಮೇಲ್ ಸೃಷ್ಟಿಸಿ ಪಾರ್ಮ್​ನ ಮುಖ್ಯಸ್ಥರಿಂದ ಲೈಂಗಿಕ ಕಿರುಕುಳ ಅಸಭ್ಯ ವರ್ತನೆ ಹಾಗೂ ಮಾನಸಿಕ ಕಿರುಕುಳ ನೀಡುತಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಪತ್ರಿಕಾ ಪ್ರಕಟಣೆ

ನಕಲಿ ಇಮೇಲ್ ಸೃಷ್ಟಿಸಿ ಮಾನಸಿಕ ಕಿರುಕುಳ ನೀಡುವ ಜೊತೆಗೆ ಕೆಲಸಕ್ಕೆ ರಾಜೀನಾಮೆ ನೀಡುವುದಾಗಿ ಗೌರಿ ಎಂಬ ಹೆಸರಿನಲ್ಲಿ ನಕಲಿ ಇ ಮೇಲ್ ಸೃಷ್ಟಿಸಿ ಮೇಲಧಿಕಾರಿಗಳಿಗೆ ಸಲ್ಲಿಸಿದ್ದ ಆರೋಪಿ. ಈ ಕುರಿತು 7-3-2019 ರಂದು ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಸಿಇಎನ್ ಅಪರಾಧ ಠಾಣಾಧಿಕಾರಿ ರಾಜೇಸಾಬ್ ನದಾಫ್ ,ಪಿಎಸ್ಐ ಸೋಮಶೇಖರ ಕೆಂಚರೆಡ್ಡಿ ನೇತೃತ್ವದ ತಂಡ ಪ್ರಕರಣ ಭೇದಿಸಿದ್ದಾರೆ.

ಈ ಕುರಿತು ತನಿಖಾ ತಂಡದಿಂದ ಇ ಮೇಲ್ ಜಾಡು ಹಿಡಿದು ಜವಳಗೇರಾ ಫಾರ್ಮ್ ಹೌಸ್​ಗೆ ಭೇಟಿ ನೀಡಿ ಕಚೇರಿಯಲ್ಲಿ ಲ್ಯಾಪ್ ಟಾಪ್ ಮೊಬೈಲ್ ಹಾಗೂ ಸಿಬ್ಬಂದಿಯ ಐಪಿ ನಂಬರ್ ವಿಚಾರಿಸಿದಾಗ ಆರೋಪಿ ದೇವಿಂದ್ರಸಿಂಗ್ (ಅಸಿಸ್ಟೆಂಟ್ ಮ್ಯಾನೆಜರ್ ) ಬಲೆಗೆ ಸಿಕ್ಕಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ದೇವೆಂದ್ರ ಸಿಂಗ್​ನಿಂದ ಲ್ಯಾಪ್ ಟಾಪ್ ,ಮೊಬೈಲ್, ಎರಡು ಸಿಮ್ ಮೊಡೆಮ್ ವಶಪಡಿಸಿಕೊಂಡಿದ್ದು, ಸದ್ಯ ಆರೋಪಿ‌ ನ್ಯಾಯಾಂಗ ಬಂಧನದಲ್ಲಿದ್ದಾನೆ.

ABOUT THE AUTHOR

...view details