ರಾಯಚೂರು :ವಿಶ್ವದಲ್ಲಿ ಹರಡಿರುವ ಕೊರೊನಾ ರೋಗ ನಿಯಂತ್ರಣಕ್ಕೆ ಬರಲಿ, ವಿಶ್ವದ ಜನತೆ ಆರೋಗ್ಯವಂತರಾಗಿ ಜೀವಿಸಲಿ ಎಂದು ಪ್ರಾರ್ಥಿಸಿ ನಗರದ ಸಾವಿರ ದೇವರ ಸಂಸ್ಥಾನ ಕಿಲೇ ಬ್ರಹ್ಮನ್ಮಠದಲ್ಲಿ ಇಂದು ಲೋಕ ಕಲ್ಯಾಣಾರ್ಥವಾಗಿ ಮಹಾ ಮೃತ್ಯುಂಜಯ ಹೋಮ ನಡೆಸಲಾಯಿತು.
ಲೋಕ ಕಲ್ಯಾಣಾರ್ಥವಾಗಿ ಬ್ರಹ್ಮನ್ಮಠದಲ್ಲಿ ಮಹಾ ಮೃತ್ಯುಂಜಯ ಹೋಮ - Maha Mrutunjaya homa
ಕಳೆದ 6 ತಿಂಗಳಿನಿಂದ ಕೊರೊನಾ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಆತ್ಮಸ್ಥೈರ್ಯ ಹೆಚ್ಚಲಿ ಹಾಗೂ ದೇಶದ ರೈತಾಪಿ ವರ್ಗ ಅತಿವೃಷ್ಟಿ, ಅನಾವೃಷ್ಟಿಗೆ ಸಿಲುಕದೆ ನೆಮ್ಮದಿಯ ಜೀವನ ನಡೆಸುವ ಶಕ್ತಿ ಭಗವಂತ ಕರುಣಿಸಲಿ..
ಮಹಾ ಮೃತ್ಯುಂಜಯ ಹೋಮದ ನಿಮಿತ್ತ ಜಿಲ್ಲಾ ವೈದಿಕ ವೃಂದದವರ ನೇತೃತ್ವದಲ್ಲಿ ಬೆಳಗ್ಗೆಯಿಂದ ಮಠದಲ್ಲಿ ವಿವಿಧ ಧಾರ್ಮಿಕ ಪೂಜೆಗಳು ನಡೆದವು. ಸಾವಿರ ದೇವರ ಸಂಸ್ಥಾನ ಕಿಲೇ ಬ್ರಹ್ಮನ್ಮಠದ ಪಿಠಾಧಿಪತಿ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಠದಲ್ಲಿ ಇಂದು ವೈದಿಕ ವೃಂದದವರ ನೇತೃತ್ವದಲ್ಲಿ ವಿಶ್ವದಲ್ಲಿ ಹರಡಿರುವ ಕೊರೊನಾ ರೋಗಕ್ಕೆ ಶೀಘ್ರ ಔಷಧಿ ಸಿಗಲಿ.
ಕಳೆದ 6 ತಿಂಗಳಿನಿಂದ ಕೊರೊನಾ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಆತ್ಮಸ್ಥೈರ್ಯ ಹೆಚ್ಚಲಿ ಹಾಗೂ ದೇಶದ ರೈತಾಪಿ ವರ್ಗ ಅತಿವೃಷ್ಟಿ, ಅನಾವೃಷ್ಟಿಗೆ ಸಿಲುಕದೆ ನೆಮ್ಮದಿಯ ಜೀವನ ನಡೆಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿ ಲೋಕ ಕಲ್ಯಾಣಾರ್ಥ ಮಹಾ ಮೃತ್ಯುಂಜಯ ಹೋಮವನ್ನು ಸಂಕ್ಷಿಪ್ತ ಸದ್ಭಕ್ತರ ಸಮಕ್ಷಮದಲ್ಲಿ ನಡೆಸಲಾಗಿದೆ ಎಂದರು.