ರಾಯಚೂರು: ಶ್ರೀ ಕವೀಂದ್ರ ತೀರ್ಥ ಮಧ್ಯಾರಾಧನೆ ಮಹೋತ್ಸವದ ಅಂಗವಾಗಿ ಸುಕ್ಷೇತ್ರ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಇಂದು ಮೂಲ ನವ ಬೃಂದಾವನ ಗಡ್ಡಿಯಲ್ಲಿ ದೇವರು ಇತರೆ ಸಂಸ್ಥಾನ ದೇವತೆಗಳಿಗೆ ಮಹಾಭಿಷೇಕ ಜರುಗಿತು.
ಶ್ರೀಮಠದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳು ಮಹಾಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು.