ಕರ್ನಾಟಕ

karnataka

ETV Bharat / state

ಯಾವುದೇ ಪ್ರಾದೇಶಿಕ ಪಕ್ಷ ಸೇರುವುದಿಲ್ಲ : ಎಂಟಿಬಿ ನಾಗರಾಜ್

ನಾನು ಯಾವ ಪ್ರಾದೇಶಿಕ ಪಕ್ಷದ ಜೊತೆ ಹೋಗಲ್ಲ, ನಾನು ಭಾರತೀಯ ಜನತಾ ಪಕ್ಷದಲ್ಲೇ ಇರುತ್ತೇನೆ ಎಂದು ಜನಾರ್ದನ ರೆಡ್ಡಿ ಅವರ ಪಕ್ಷ ಸೇರುವುದಿಲ್ಲ ಎಂಬುದನ್ನು ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದರು.

m-t-b-nagaraj-reaction-about-assembly-election
ಎಂಟಿಬಿ ನಾಗರಾಜ್

By

Published : Dec 8, 2022, 8:59 AM IST

ರಾಯಚೂರು:ವಿಧಾನಪರಿಷತ್ ಹೆಚ್.ವಿಶ್ವನಾಥ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಭೇಟಿ ವಿಚಾರಕ್ಕೆ ಸಚಿವ ಎಂಟಿಬಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ.

ಹೆಚ್​ ವಿಶ್ವನಾಥ್, ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ್ದಾರೆ, ಅವರ ಜೊತೆ ಮಾತನಾಡಿದ್ದಾರೆ. ಇನ್ನೂ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ಹೋದಾಗ, ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿಯಾಗಿದ್ದಾರೆ. ಅವರು ಕಾಂಗ್ರೆಸ್​ಗೆ ಹೋಗೋದರ ಬಗ್ಗೆ ಗೊತ್ತಿಲ್ಲ. ಅವರ ಮನಸ್ಥಿತಿಯ ಬಗ್ಗೆ ಗೊತ್ತಿಲ್ಲ ಎಂದರು.

ಈ ಬಾರಿ ಹೊಸಕೋಟೆಯಿಂದ ಸ್ಪರ್ಧಿಸುತ್ತೇನೆ. 120 ಸ್ಥಾನ ತರುತ್ತೇವೆ, ವರಿಷ್ಠರು ನನಗೆ ಸ್ಪರ್ಧಿಸು ಅಂದ್ರೆ ನಾನು ಚುನಾವಣೆಗೆ ನಿಲ್ಲುತ್ತೇನೆ. ಮಗನನ್ನು ನಿಲ್ಲಿಸಬೇಕು ಅಂದ್ರೆ ಮಗನನ್ನು ನಿಲ್ಲಿಸುತ್ತೇನೆ. ಭಾರತೀಯ ಜನತಾ ಪಾರ್ಟಿ ಬಿಟ್ಟು ಹೋಗಲ್ಲ. ಬಿಜೆಪಿ ಅಧಿಕಾರಕ್ಕೆ ತರೊದೊಂದೇ ಗುರಿ ಎಂದು ಹೇಳಿದರು.

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಅವರು ಆಹ್ವಾನ ನೀಡಿರೊ ಗುಮಾನಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಂಟಿಬಿ ನಾನು ಯಾವ ಪ್ರಾದೇಶಿಕ ಪಕ್ಷದ ಜೊತೆ ಹೋಗಲ್ಲ, ಬಿಜೆಪಿಯಲ್ಲೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.

ಯಾವುದೇ ಪ್ರಾದೇಶಿಕ ಪಕ್ಷ ಸೇರುವುದಿಲ್ಲ : ಎಂಟಿಬಿ ನಾಗರಾಜ್

ಸಿದ್ದರಾಮಯ್ಯಗೆ ಸಿದ್ರಾಮುಲ್ಲಾಖಾನ್ ಅಂತ ಬಿಂಬಿಸುತ್ತಿರೊ ವಿಚಾರ ಪ್ರಕ್ರಿಯೆ ನೀಡಿದ ಅವರು, ಯಾರು ಕರೆಯುತ್ತಾರೋ ಅದು, ಅವರವರ ವೈಯಕ್ತಿಕ ವಿಚಾರ ಎಂದು ತಿಳಿಸಿದರು.

ಎಂಟಿಬಿ ಎರಡನೇ ಹಂತದ ಸಮುದಾಯ ನಾಯಕನ ಪಟ್ಟಕ್ಕೆ ಓಡಾಟ ವಿಚಾರ ಮಾತನಾಡಿ, ಮೊದಲನೇ ಹಂತ, ಎರಡನೇ ಹಂತದ ನಾಯಕರಾಗಬೇಕು ಅನ್ನೋ ಮನಸ್ಥಿತಿಯಿಲ್ಲ. ನಮ್ಮಂಥ ಶಕ್ತಿ ಇರೋರು ಸಮುದಾಯದ ಸಂಘಟನೆ ಮಾಡಬೇಕು ಅಷ್ಟೇ ಎಂದರು.

ರಾಜ್ಯ ಹಾಗೂ ಮಹಾರಾಷ್ಟ್ರದ ಮಧ್ಯೆ ಗಡಿ ವಿವಾದ ವಿಚಾರದಲ್ಲಿ ಗಡಿ ವಿಚಾರದಲ್ಲಿ ಬಹಳ ಕ್ಯಾತೆ ತೆಗೆದಿದ್ದಾರೆ. ಕನ್ನಡ ಸಂಘಟನೆ ಹೋರಾಟಗಾರರು ಪ್ರತಿಭಟಿಸುತ್ತಿದ್ದಾರೆ. ಈ ಕೇಸ್ ನ್ಯಾಯಾಲಯದಲ್ಲಿದೆ. ಅದನ್ನು ಸಾಮರಸ್ಯವಾಗಿ ಬಗೆಹರಿಸಬೇಕು ಎಂದು ಸಚಿವ ಎಂಟಿಬಿ ನಾಗರಾಜ್​ ಹೇಳಿದರು.

ಇದನ್ನೂ ಓದಿ:ಜನಾರ್ದನ ರೆಡ್ಡಿ ವಿರುದ್ಧದ ಬೇನಾಮಿ ಪ್ರಕರಣ ಮುಕ್ತಾಯಗೊಳಿಸಿದ ನ್ಯಾಯಾಲಯ

ABOUT THE AUTHOR

...view details