ಕರ್ನಾಟಕ

karnataka

ETV Bharat / state

ರಾಯಚೂರು : ಪ್ರೀತಿಸಿದ್ರೂ ಮದುವೆ ಆಗಲಾಗಲಿಲ್ಲ ಎಂದು ನೇಣು ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ! - ರಾಯಚೂರು ಲೇಟೆಸ್ಟ್​​ ಕ್ರೈಂ ನ್ಯೂಸ್​​

ಮದುವೆಯಾಗಲು ಆಗಲಿಲ್ಲ ಎಂದು ಮನನೊಂದು ಇಬ್ಬರು ಪ್ರೇಮಿಗಳು ಹೊಲದಲ್ಲಿ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ..

lovers-commit-suicide-in-raichur
lovers-commit-suicide-in-raichur

By

Published : Apr 23, 2022, 8:49 AM IST

Updated : Apr 24, 2022, 7:25 AM IST

ರಾಯಚೂರು :ಪ್ರೇಮಿಗಳು ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಆರ್‌ಹೆಚ್‌ ಕ್ಯಾಂಪ್‌ 3ರಲ್ಲಿ ನಡೆದಿದೆ. ಲವಕುಮಾರ್ ಸರ್ಕಾರ್(24) ಹಾಗೂ ಕರೀನಾ (18) ಎಂಬುವರು ಮೃತ ಪ್ರೇಮಿಗಳು.

ಘಟನೆಯ ವಿವರ :ಲವಕುಮಾರ್ ಹಾಗೂ ಕರೀನಾ ಇಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಕಳೆದ ಎರಡು ತಿಂಗಳ‌ ಹಿಂದೆ ಲವಕುಮಾರ್​ಗೆ ಕುಟುಂಬಸ್ಥರು ನೋಡಿದ ಬೇರೆ ಹುಡುಗಿಯೊಂದಿಗೆ ಮದುವೆ ಮಾಡಲಾಯಿತು.

ಪ್ರೀತಿಸಿದ ಪ್ರೇಯಸಿಯೊಂದಿಗೆ ಮದುವೆಯಾಗಲು ಆಗಲಿಲ್ಲ ಎಂದು ಮನನೊಂದು ಇಬ್ಬರು ಹೊಲದಲ್ಲಿ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

ಘಟನಾ ಸ್ಥಳಕ್ಕೆ ಸಿಂಧನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮಕ್ಕಳ ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡಿದ್ರೆ ಶಿಕ್ಷೆ ಗ್ಯಾರಂಟಿ, ಎಚ್ಚರ!

Last Updated : Apr 24, 2022, 7:25 AM IST

ABOUT THE AUTHOR

...view details