ರಾಯಚೂರು: ಲಕ್ಷಾಂತರ ರೂಪಾಯಿ ಮೌಲ್ಯದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಲಾರಿ ಮೂಲಕ ಸಾಗಿಸುತ್ತಿದ್ದ ವೇಳೆ ಪೊಲೀಸರು ಲಾರಿ ಹಾಗೂ ಅಕ್ಕಿಯನ್ನು ಜಪ್ತಿ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ಹೊರವಲಯ ಆಶಾಪುರ್ ರಸ್ತೆಯಲ್ಲಿ ಬರುವ ಲೇಔಟ್ ಒಂದರಲ್ಲಿ ಅಕ್ರಮವಾಗಿ ಲಾರಿ ಒಂದರಲ್ಲಿ ಪಡಿತರ ಅಕ್ಕಿ ಸಾಗಿಸುತ್ತಿರುವ ಕುರಿತಂತೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.
ರಾಯಚೂರು: ಪಡಿತರ ಅಕ್ಕಿ ಸಾಗಾಟ..ಲಾರಿ ವಶಕ್ಕೆ ಪಡೆದ ಪೊಲೀಸರು - ರಾಯಚೂರಿನಲ್ಲಿ ಪಡಿತರವನ್ನು ವಶಕ್ಕೆ ಪಡೆದ ಪೊಲೀಸರು
ರಾಯಚೂರು ನಗರದ ಹೊರವಲಯದ ಆಶಾಪುರ್ ರಸ್ತೆಯಲ್ಲಿ ಬರುವ ಲೇಔಟ್ ಒಂದರಲ್ಲಿ ಅಕ್ರಮವಾಗಿ ಲಾರಿ ಒಂದರಲ್ಲಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವೇಳೆ ಪೊಲೀಸರು ಜಪ್ತಿ ಮಾಡಿದ್ದಾರೆ.
![ರಾಯಚೂರು: ಪಡಿತರ ಅಕ್ಕಿ ಸಾಗಾಟ..ಲಾರಿ ವಶಕ್ಕೆ ಪಡೆದ ಪೊಲೀಸರು ಲಾರಿ ವಶಕ್ಕೆ ಪಡೆದ ಪೊಲೀಸರು](https://etvbharatimages.akamaized.net/etvbharat/prod-images/768-512-15152146-thumbnail-3x2-sanju.jpg)
ಪೊಲೀಸರು ಸ್ಥಳಕ್ಕೆ ಭೇಟಿದ ವೇಳೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಅಂದಾಜು 400 ಚೀಲದ ಅಕ್ಕಿ ಮೂಟೆಗಳು ಪತ್ತೆಯಾಗಿವೆ. ವಿಷಯ ತಿಳಿದ ಸ್ಥಳಕ್ಕೆ ಆಗಮಿಸಿದ ಆಹಾರ ಇಲಾಖೆಯ ಅಧಿಕಾರಿಗಳು ಪಡಿತರ ಅಕ್ಕಿಯೆಂದು ದೃಢಪಡಿಸಲಾಗಿದ್ದು, ಆಹಾರ ಮತ್ತು ನಾಗರಿಕ ಸೇವೆ ದಾಸ್ತಾನಿಗೆ ಕಳುಹಿಸಲಾಗಿದೆ. ಅಲ್ಲದೇ, ಅಕ್ಕಿ ತೆಗೆದುಕೊಂಡ ಲಾರಿ ಬಾಗಲಕೋಟ ಜಿಲ್ಲೆಗೆ ಸೇರಿದೆ ಎನ್ನಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸೇವೆಯ ಶಿರಸ್ತೇದಾರ ತಿಳಿಸಿದ್ದಾರೆ.
ಓದಿ:ಗ್ರಾಮ ಪಂಚಾಯಿತಿಗಳು, 7 ಪುರಸಭೆ, ಒಂದು ನಗರ ಸಭೆಗೆ ಚುನಾವಣೆ ದಿನಾಂಕ ನಿಗದಿ