ರಾಯಚೂರು:ಪೊಲೀಸ್ ಚೆಕ್ ಪೋಸ್ಟ್ ಕಟ್ಟಡಕ್ಕೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ರಾಯಚೂರು ತಾಲೂಕಿನ ಶಕ್ತಿನಗರ 2ನೇ ಕ್ರಾಸ್ ಬಳಿ ನಡೆದಿದೆ.
ಲಾರಿ ಹೊಸಪೇಟೆಯಿಂದ ಹೈದರಾಬಾದ್ ಕಡೆ ತೆರಳುತ್ತಿತ್ತು. ಆದರೆ ಶಕ್ತಿನಗರದ 2ನೇ ಕ್ರಾಸ್ ಬಳಿಯಿರುವ ಪಾಳು ಬಿದ್ದಿರುವ ಹಳೆಯ ಪೊಲೀಸ್ ಚೆಕ್ ಪೋಸ್ಟ್ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಟ್ಟಡಕ್ಕೆ ಹಾನಿಯಾಗಿದ್ದು, ಚಾಲಕನ ದೇಹ ಎರಡು ತುಂಡಾಗಿದೆ. ಜೊತೆಗೆ ಲಾರಿಯಲ್ಲೇ ಮೃತದೇಹ ಸಿಲುಕಿತ್ತು. ಬಳಿಕ ಜೆಸಿಬಿ ಸಹಾಯದಿಂದ ಮೃತದೇಹ ಹೊರತೆಗೆಯಲಾಗಿದೆ.