ರಾಯಚೂರು: ಕೋಳಿ ಸಾಗಾಣಿಕೆ ಮಾಡುತ್ತಿದ್ದ ಲಾರಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಯಚೂರು ತಾಲೂಕಿನ ಗುಂಜಳ್ಳಿ ಬಳಿ ನಡೆದಿದೆ.
ಗಿಲ್ಲೆಸೂಗೂರು ಗ್ರಾಮದ ಅನಿಲ್(20), ರಂಜಾನ್(35) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮಹೆಬೂಬ್ ನಗರದಲ್ಲಿನ ಫಾರಂನಿಂದ ಕೋಳಿಗಳನ್ನು ತೆಗೆದುಕೊಂಡು ರಾಯಚೂರು ತಾಲೂಕಿನಲ್ಲಿರುವ ವಿವಿಧ ಚಿಕನ್ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು.