ರಾಯಚೂರು:ಖಾಸಗಿ ಶಾಲೆಗಳ ವಾಹನಗಳಲ್ಲಿ ಮಕ್ಕಳನ್ನು ಶಾಲೆ ಕರೆದುಕೊಂಡು ಹೋಗಲು ಸುರಕ್ಷಿತ ಕ್ರಮಗಳನ್ನ ಅನುಸರಿಬೇಕು. ಆದರೆ, ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಮಾಂಟೇಸ್ಸರಿ ಖಾಸಗಿ ಶಾಲೆಯು ಈ ನಿಮಯವನ್ನು ಪಾಲಿಸದೇ ಚಿಕ್ಕಮಕ್ಕಳೊಂದಿಗೆ ಅಂಧಾ ದರ್ಬಾರ್ ನಡೆಸುತ್ತಿದೆ. ಇದಕ್ಕೆ ಇಂದು ಸಾಕ್ಷಿಯೂ ದೊರೆತಿದೆ.
ಮಾಂಟೇಸ್ಸರಿ ಶಾಲೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ಮಾರುತಿ ಓಮಿನಿ ವ್ಯಾನ್ನಲ್ಲಿ ನಿಮಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳಲಾಗಿತ್ತು. ಇದಾದ ಬಳಿಕ ಓರ್ವ ಬಾಲಕನನ್ನು ವಾಹನದ ಹೊರಭಾಗದ ಫುಟ್ ಸ್ಟ್ಯಾಂಡ್ ಮೇಲೆ ನಿಲ್ಲಿಸಿಕೊಂಡು ಮಕ್ಕಳನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ಒಂದು ವೇಳೆ ಬಾಲಕ ಸ್ವಲ್ಪ ಎಚ್ಚರ ತಪ್ಪಿದ್ದರೂ ಅಪಾಯ ಮಾತ್ರ ತಪ್ಪಿದ್ದಲ್ಲ. ಇದ್ಯಾವುದನ್ನು ಲೆಕ್ಕಸದೇ ಚಾಲಕ ಮಗುವನ್ನ ಹಾಗೆ ಶಾಲೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ಸಹ ಪ್ರಯಾಣಿಕನ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ರಾಜ್ಯಾದ್ಯಂತ ಸದ್ದು ಸಹ ಮಾಡುತ್ತಿದೆ. ಮಾನ್ವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.