ಕರ್ನಾಟಕ

karnataka

ETV Bharat / state

ಕಳೆದ ಬಾರಿ ಮೋದಿ ಅಲೆಯಿದ್ದರು ನನ್ನನ್ನು ಗೆಲ್ಲಿಸಿದ್ದ ಜನ, ಈ ಬಾರಿಯು ಕೈ ಹಿಡಿಯುತ್ತಾರೆ: ಬಿ.ವಿ.ನಾಯಕ್​​ - ರಾಯಚೂರು

ಲೋಕಸಭೆ ಚುನಾವಣೆ ಅಖಾಡ, ದಿನ ದಿನಕ್ಕೆ ರಂಗೇರುತ್ತಿದೆ. ಗೆಲುವು ಸಾಧಿಸಲೆಬೇಕು ಎಂದು ಎಲ್ಲಾ ಪಕ್ಷಗಳು ತಮ್ಮದೆ ಲೆಕ್ಕಾಚಾರದಲ್ಲಿ ತಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ರೆಡಿಯಾಗಿವೆ. ಹಾಗೆಯೆ ರಾಯಚೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್​ನ ಹಾಲಿ ಸಂಸದರನ್ನ ಬಹುತೇಕ ಅಂತಿಮಗೊಳಿಸಲಾಗಿದೆ.

ರಾಯಚೂರು ಕಾಂಗ್ರೆಸ್​​ ಅಭ್ಯರ್ಥಿ ಬಿ ವಿ ನಾಯಕ್​​​.

By

Published : Mar 22, 2019, 12:42 AM IST

ರಾಯಚೂರು : ಲೋಕಸಭೆ ಚುನಾವಣೆ ಅಖಾಡ, ದಿನ ದಿನಕ್ಕೆ ರಂಗೇರುತ್ತಿದೆ. ಗೆಲುವು ಸಾಧಿಸಲೆಬೇಕು ಎಂದು ಎಲ್ಲಾ ಪಕ್ಷಗಳು ತಮ್ಮದೆ ಲೇಕ್ಕಾಚಾರದಲ್ಲಿ ತಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ರೆಡಿಯಾಗಿವೆ.

ರಾಯಚೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್​ನ ಹಾಲಿ ಸಂಸದರನ್ನ ಬಹುತೇಕ ಅಂತಿಮಗೊಳಿಸಿದ್ದರೆ. ಇನ್ನೂ ಬಿಜೆಪಿ ಅಭ್ಯರ್ಥಿಯನ್ನ ಫೈನಲ್ ಮಾಡಿಲ್ಲ. ಈ ಮಧ್ಯೆ ಕಾಂಗ್ರೆಸ್ ಪಕ್ಷ ಪ್ರಚಾರಕ್ಕೆ ಭರ್ಜರಿ ಸಿದ್ದತೆ ನಡೆಸಿದ್ದು, ಕಾಂಗ್ರೆಸ್​​​ ಪಕ್ಷದ ಅಭ್ಯರ್ಥಿಯೊಂದಿಗೆ ನಮ್ಮ ಪ್ರತಿನಿಧಿ ಮಲ್ಲಿಕಾರ್ಜುನ ಸ್ವಾಮಿ ನಡೆಸಿರುವ ಸಂದರ್ಶನ ಇಲ್ಲಿದೆ .

ರಾಯಚೂರು ಕಾಂಗ್ರೆಸ್​​ ಅಭ್ಯರ್ಥಿ ಬಿ ವಿ ನಾಯಕ್​​​.


ಪರಿಶಿಷ್ಟ ಪಂಗಡಕ್ಕೆ(ಎಸ್‌ಟಿ) ಮೀಸಲಾಗಿರುವ ರಾಯಚೂರು ಲೋಕಸಭೆ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂದೇ ಬಿಂಬಿಸಿಕೊಂಡಿದೆ. ಹೀಗಾಗಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಮೋದಿಯ ಅಬ್ಬರದ ನಡುವೆಯೂ ಕಾಂಗ್ರೆಸ್ ತನ್ನ ಕ್ಷೇತ್ರವನ್ನ ಉಳಿಸಿಕೊಳ್ಳುವುದರಲ್ಲಿ ಯಶ್ವಸಿಯಾಯಿತು.

ಈ ಹಿಂದೆ ನಾಲ್ಕು ಬಾರಿಯಾಗಿ ಸಂಸದರಾಗಿ ಆಯ್ಕೆಯಾಗಿದ್ದ ದಿ.ಎ.ವೆಂಕಟೇಶ್ ನಾಯಕ ಸುಪುತ್ರ ಬಿ.ವಿ.ನಾಯಕರನ್ನ ಕಣಕ್ಕೆ ಇಳಿಸಿ ಅಲ್ಪ ಮತಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಸಹ ಗೆಲುವು ಸಾಧಿಸಬೇಕು ಎನ್ನುವ ಉದ್ದೇಶದಿಂದ ಸಂಸದ ಬಿ.ವಿ.ನಾಯಕಯವರೆ ಅಭ್ಯರ್ಥಿಯೆಂದು ಬಹುತೇಕ ಖಚಿತವಾಗಿದ್ದು, ಕ್ಷೇತ್ರದಲ್ಲಿ ಬಿ.ವಿ.ನಾಯಕ ಪ್ರಚಾರಕ್ಕೆ ಧುಮುಕ್ಕಿದ್ದಾರೆ.

ABOUT THE AUTHOR

...view details