ರಾಯಚೂರು :ನಗರದಲ್ಲಿ ಯಾವುದೇ ಕೊರೊನಾ ಪಾಸಿಟಿವ್ ದಾಖಲಾಗದ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಹಸಿರು ವಲಯ ಎಂದು ಗುರುತಿಸಲಾಗಿತ್ತು. ಅಲ್ಲದೆ ಲಾಕ್ಡೌನ್ ನಿಯಮದಲ್ಲೂ ಸಡಿಲಿಕೆ ಮಾಡಲಾಗಿದೆ.
ಗ್ರೀನ್ಝೋನ್ ರಾಯಚೂರಿನಲ್ಲಿ ಲಾಕ್ಡೌನ್ ಮರೆತ ಜನತೆ.. - ಗ್ರೀನ್ ಝೋನ್ ನಗರ
ರಾಜ್ಯದ ಹಲವು ಜಿಲ್ಲೆಗಳು ಗ್ರೀನ್ ಝೋನ್ನಲ್ಲಿರುವುದರಿಂದ ಲಾಕ್ಡೌನ್ ನಿಯಮ ಸಡಿಲಿಸಲಾಗಿದೆ. ಆದರೆ ಇಂತಹ ಪ್ರದೇಶದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿರುವ ಪ್ರಕರಣಗಳು ನಡೆಯುತ್ತಿವೆ.
ಗ್ರೀನ್ ಝೋನ್ ರಾಯಚೂರಲ್ಲಿ ಲಾಕ್ಡೌನ್ ಮರೆತ ಜನತೆ...!
ಆದರೆ, ಈ ನಡುವೆ ನಗರದಲ್ಲಿ ವ್ಯಾಪಾರ-ವಹಿವಾಟಿಗೆ ಅವಕಾಶ ಮಾಡಿಕೊಡಲಾಗಿದೆ. ಸ್ಯಾನಿಟೈಸರ್ ಬಳಸುವುದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸುವ ಮೂಲಕ ನಿಯಮ ಪಾಲನೆ ಮಾಡಬೇಕಿದೆ. ಆದರೆ, ಇದೆಲ್ಲಾ ನಿಯಮಗಳನ್ನು ನಗರದ ಹಲವೆಡೆ ಗಾಳಿಗೆ ತೂರಿ ಜನ ಲಾಕ್ಡೌನ್ ಜಾರಿಯೇ ಆಗಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಈ ರೀತಿಯ ನಡತೆಯ ವಿರುದ್ಧ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.