ರಾಯಚೂರು :ಜಿಲ್ಲೆಯ ಲಿಂಗಸುಗೂರು ತಾಲೂಕಿನಾದ್ಯಂತ ಈಚಲು ಗಿಡಗಳನ್ನ ಬಳಸಿಕೊಂಡು ಬದುಕು ಕಟ್ಟಿಕೊಂಡ ಕೊರವ ಜನಾಂಗದ ಜನರು ಲಾಕ್ಡೌನ್ನಿಂದಾಗಿ ಕಂಗಾಲಾಗಿದ್ದಾರೆ.
ಲಾಕ್ಡೌನ್ ಎಫೆಕ್ಟ್.. ಸರ್ಕಾರದ ನೆರವು ಕೋರುತ್ತಿರುವ ಕೊರವ ಜನಾಂಗ.. - ರಾಯಚೂರು ಸುದ್ದಿ
ಲಿಂಗಸುಗೂರು ತಾಲೂಕಿನಾದ್ಯಂತ ಈಚಲು ಗಿಡಗಳನ್ನ ಬಳಸಿ ಬುಟ್ಟಿ, ಪೊರಕೆ ಸೇರಿದಂತೆ ಇನ್ನಿತರ ವಸ್ತುಗಳನ್ನ ತಯಾರಿಸಿ ಬದುಕು ನಿರ್ವಹಣೆ ಮಾಡುತ್ತಿದ್ದ ಕೊರವ ಜನಾಂಗದವರು ಸಂಕಷ್ಟಕ್ಕೀಡಾಗಿದ್ದಾರೆ. ತಮ್ಮ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ಲಾಕ್ಡೌನ್ ಎಫೆಕ್ಟ್:ಸರ್ಕಾರದ ನೆರವು ಕೋರುತ್ತಿರುವ ಕೊರವ ಜನಾಂಗ
ಕೊರವ ಜನಾಂಗದವರು ಈಚಲು ಗಿಡಗಳನ್ನ ಬಳಸಿ ಬುಟ್ಟಿ, ಪೊರಕೆ ಸೇರಿದಂತೆ ಇನ್ನಿತರ ವಸ್ತುಗಳನ್ನ ತಯಾರಿಸಿ ಬದುಕು ನಿರ್ವಹಣೆ ಮಾಡುತ್ತಿದ್ದರು. ಸದ್ಯ ತಾಲೂಕಿನಲ್ಲಿ ಈಚಲು ಗಿಡಗಳು ನಶಿಸುತ್ತಿವೆ. ಇವುಗಳನ್ನ ಹುಡುಕಿ ದೂರ ಪ್ರದೇಶಗಳಿಂದ ಖರೀದಿ ಮಾಡುವ ಅನಿವಾರ್ಯತೆ ಎದುರಾಗಿದೆ. ಆದರೆ, ಲಾಕ್ಡೌನ್ನಿಂದಾಗಿ ಬೇರೆ ಪ್ರದೇಶಗಳಿಗೂ ಹೋಗಲು ಸಾದ್ಯವಾಗುತ್ತಿಲ್ಲ. ಹೀಗಾಗಿ ಕೊರವ ಜನಾಂಗದವರು ಕಂಗಾಲಾಗಿದ್ದಾರೆ.
ಹೀಗಾಗಿ ಸಂಕಷ್ಟದಲ್ಲಿರುವ ತಮ್ಮ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಕೊರವ ಜನಾಂಗದ ಶಾರದಮ್ಮ ಎಂಬುವರು ಮನವಿ ಮಾಡಿದ್ದಾರೆ.