ರಾಯಚೂರು: ಜಿಲ್ಲೆಯಲ್ಲಿ ಸದ್ಯ ಜಾರಿ ಇರುವ ಕಠಿಣ ಲಾಕ್ಡೌನ್ ಮುಂದುವರಿಕೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ನಗರದ ಕೃಷಿ ವಿವಿ ಆವರಣದಲ್ಲಿ ಭಾರತೀಯ ಸೇವಾ ಸಂಸ್ಥೆ ಆರಂಭಿಸಿರುವ ಕೋವಿಡ್ ಕೇರ್, ಆರೈಕೆ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮೂರು ದಿನ ಬಳಿಕ ಅಗತ್ಯ ವಸ್ತು ಮಾರಾಟ ಖರೀದಿಗೆ ಅವಕಾಶ ಕೊಟ್ಟು, ಜಿಲ್ಲೆಯ ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಲಾಕ್ಡೌನ್ ಮುಂದುವರಿಕೆ ಮಾಡಲಾಗುವುದು ಎಂದಿದ್ದಾರೆ.
ರಾಯಚೂರಲ್ಲೂ ಲಾಕ್ಡೌನ್ ಮುಂದುವರಿಕೆ: ಲಕ್ಷ್ಮಣ ಸವದಿ - ಕೋವಿಡ್ ಕೇರ್
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ನಡುವೆ ಕೆಲ ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರಿಸುವ ನಿರ್ಧಾರಕ್ಕೆ ಬರಲಾಗಿದ್ದು, ಇದೀಗ ರಾಯಚೂರಲ್ಲೂ ಲಾಕ್ಡೌನ್ ನಿರ್ಬಂಧ ಮುಂದುವರಿಸುವುದಾಗಿ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ಲಕ್ಷ್ಮಣ ಸವದಿ
ಕಠಿಣ ಲಾಕ್ಡೌನ್ ಎಷ್ಟು ದಿನ ಮುಂದುವರಿಕೆ ಅನ್ನೊ ಬಗ್ಗೆ ನಂತರ ತಿಳಿಸಲಾಗುವುದು. ರಾಜ್ಯದ ಲಾಕ್ಡೌನ್ ಬಗ್ಗೆ ಇಂದು ಸಿಎಂ ಜೊತೆ ಚರ್ಚಿಸಲಾಗುವುದು ಎಂದರು. ಜಿಲ್ಲೆಯಲ್ಲಿ ಕ್ವಾರಂಟೈನ್ ಕೇಂದ್ರಗಳಿಗೆ ಸೋಂಕಿತರು ಬರದಿದ್ದರೆ ಪೊಲೀಸರ ಸಹಾಯದಿಂದ ಸೇರಿಸುವ ಕೆಲಸ ಮಾಡಲಾಗುವುದು ಎಂದರು.