ರಾಯಚೂರು:ಕೊರೊನಾ ವೈರಸ್ ಜನರನ್ನು ಬಲಿ ಪಡೆಯುತ್ತಿರುವುದಲ್ಲದೆ ಹಲವಾರು ಜನರ ಬದುಕನ್ನೂ ಅತಂತ್ರಗೊಳಿಸಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಸ್ಕಿ ಪಟ್ಟಣದ ವಿಶಿಷ್ಟ ಚೇತನ ವ್ಯಕ್ತಿಯ ಕುಟುಂಬ ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿದೆ.
ಕಳೆದ ನಾಲ್ಕು ವರ್ಷದ ಹಿಂದೆ ಕಣ್ಣು ಕಳೆದುಕೊಂಡಿರುವ ಮಸ್ಕಿಯ ನಿವಾಸಿ ಶಂಕ್ರಪ್ಪ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ವಾಸಯೋಗ್ಯ ಮನೆಯಿಲ್ಲದಿರುವ ಈ ಜೀವಕ್ಕೆ ಮುಪ್ಪಿನಲ್ಲಿಯೂ ಕುಳಿತು ತಿನ್ನುವ ಭಾಗ್ಯವಿಲ್ಲ. ಶಂಕ್ರಪ್ಪನ ಜೊತೆಗೆ ವೃದ್ಧ ತಾಯಿಯೂ ಕೂಲಿ ನಾಲಿ ಮಾಡಿ ಜೀವನದ ಬಂಡಿ ಸಾಗಿಸುತ್ತಿದ್ದಾರೆ.