ಕರ್ನಾಟಕ

karnataka

ETV Bharat / state

ರಾಯಚೂರಿನಲ್ಲಿ ವಿಮಾನ ನಿಲ್ದಾಣ.. ತಜ್ಞರಿಂದ ನಾಳೆ ಸ್ಥಳ ಪರಿಶೀಲನೆ.. - ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

ಯರಮರಸ್ ಗ್ರಾಮದ ಹೊರವಲಯದಲ್ಲಿ ವಿಮಾನ ನಿಲ್ದಾಣಕ್ಕಾಗಿ ನೂರಾರು ಎಕರೆ ಪ್ರದೇಶವನ್ನ ಮೀಸಲಿರಿಸಲಾಗಿತ್ತು. ಆದರೆ, ಇದೀಗ ಆ ಜಾಗದ ಪಕ್ಕದಲ್ಲಿ ವೈಟಿಪಿಎಸ್‌ನ ಚಿಮಣಿಗಳನ್ನು ಎತ್ತರವಾಗಿ ನಿರ್ಮಾಣ ಮಾಡ್ಲಾಗಿದೆ. ಇದರಿಂದ ವಿಮಾನ ನಿಲ್ದಾಣಕ್ಕೆ ತಾಂತ್ರಿಕ ಸಮಸ್ಯೆ ಉಂಟಾಗಬಹುದಾದ ಸಾಧ್ಯತೆಯಿದೆ ಎನ್ನುವ ಪ್ರಶ್ನೆ ಉದ್ಭವಾಗಿತ್ತು.

Location Inspection for Raichur Airport,ರಾಯಚೂರಿನಲ್ಲಿ ವಿಮಾನ ನಿಲ್ದಾಣ
ಆರ್.ವೆಂಕಟೇಶ್​ ಕುಮಾರ್

By

Published : Nov 29, 2019, 4:33 PM IST

ರಾಯಚೂರು: ಜಿಲ್ಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಮೀಸಲಿರಿಸಿರುವ ಜಾಗದ ಪರಿಶೀಲನೆಗೆ ನಾಳೆ ತಜ್ಞರ ತಂಡ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್‌ಕುಮಾರ್​ ತಿಳಿಸಿದ್ದಾರೆ.

ಆರ್.ವೆಂಕಟೇಶ್​ ಕುಮಾರ್, ಜಿಲ್ಲಾಧಿಕಾರಿ

ಯರಮರಸ್ ಗ್ರಾಮದ ಹೊರವಲಯದಲ್ಲಿ ವಿಮಾನ ನಿಲ್ದಾಣಕ್ಕಾಗಿ ನೂರಾರು ಎಕರೆ ಪ್ರದೇಶವನ್ನ ಮೀಸಲಿರಿಸಲಾಗಿತ್ತು. ಆದರೆ, ಇದೀಗ ಆ ಜಾಗದ ಪಕ್ಕದಲ್ಲಿ ವೈಟಿಪಿಎಸ್‌ನ ಚಿಮಣಿಗಳನ್ನು ಎತ್ತರವಾಗಿ ನಿರ್ಮಾಣ ಮಾಡ್ಲಾಗಿದೆ. ಇದರಿಂದ ವಿಮಾನ ನಿಲ್ದಾಣಕ್ಕೆ ತಾಂತ್ರಿಕ ಸಮಸ್ಯೆ ಉಂಟಾಗಬಹುದಾದ ಸಾಧ್ಯತೆಯಿದೆ ಎನ್ನುವ ಪ್ರಶ್ನೆ ಉದ್ಭವಾಗಿತ್ತು.

ಹೀಗಾಗಿ ಸಿಂಗನೋಡಿ, ಚಂದ್ರಬಂಡಾ ಹಾಗೂ ಕುರುಬದೊಡ್ಡಿ ಗ್ರಾಮದ ಕೈಗಾರಿಕ ಪ್ರದೇಶ ಅಭಿವೃದ್ದಿಗಾಗಿ ಗುರುತು ಮಾಡಿರುವ 690 ಎಕರೆ ಪ್ರದೇಶದಲ್ಲಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಈಟಿವಿ ಭಾರತ ಹಲವು ವರ್ಷಗಳಿಂದ ವಿಮಾನ ನಿಲ್ದಾಣಕ್ಕೆ ಮೀಸಲು ಇರುವ ಜಾಗವನ್ನ ಸ್ಥಳಾಂತರ ಮಾಡುವ ಸಾಧ್ಯತೆ ಇರುವ ಕುರಿತು ವರದಿ ಮಾಡಿತ್ತು.

ABOUT THE AUTHOR

...view details