ರಾಯಚೂರು: ಕೃಷ್ಣ ಭಾಗ್ಯ ಜಲ ನಿಗಮದಲ್ಲಿ ಕಾಮಗಾರಿ ಕೈಗೊಳ್ಳದೇ ಹಣ ದುರುಪಯೋಗ ಪಡೆದುಕೊಳ್ಳಲಾಗಿದೆ. ಈ ಆರೋಪದ ಮೇರೆಗೆ ದಾವಣಗೆರೆಯ ಇಬ್ಬರು ಪ್ರಥಮ ದರ್ಜೆ ಗುತ್ತಿಗೆದಾರರನ್ನು, ಲಿಂಗಸುಗೂರು ಹೆಚ್ಚುವರಿ ಸಿಜೆ ಹಾಗೂ ಜೆಎಮ್ಎಫ್ಸಿ ನ್ಯಾಯಾಲಯ ದಂಡ ವಿಧಿಸಿ, ಮೂರು ವರ್ಷಗಳ ಕಾಲ ಜೈಲುಶಿಕ್ಷೆ ನೀಡಲಾಗಿದೆ.
ನಕಲಿ ಬಿಲ್ಲುಗಳನ್ನು ಸೃಷ್ಟಿಸಿ ಹರಪನಹಳ್ಳಿ ತಾಲೂಕಿನ ಅರಸಿಕೆರೆ ಗ್ರಾಮದ ಗುತ್ತಿಗೆದಾರ ಬುಲ್ಲನಗೌಡ ₹ 8,40,180 ಹಾಗೂ ಹಗರಿಬೊಮ್ಮನಳ್ಳಿ ತಾಲೂಕಿನ ಕಡ್ಲಬಾಳ ಗ್ರಾಮದ ಹೆಚ್.ಕೆ. ಶ್ರೀನಿವಾಸ ಪೂಜಾರ ₹ 8,41,141 ದುರ್ಬಳಕೆ ಮಾಡಿಕೊಂಡಿದ್ದರು. ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಮೇರೆಗೆ ಅಂದಿನ ಸಿಪಿಐ ಶಿವರಾಜ ಹೊಸಮನಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಇಬ್ಬರಿಗೆ ಅನುಕ್ರಮವಾಗಿ ₹ 50 ಸಾವಿರ ಹಾಗೂ ₹ 45 ಸಾವಿರ ದಂಡ ವಿಧಿಸಿ, ಈ ಮೊತ್ತದಲ್ಲಿ ಇಬ್ಬರೂ ತಲಾ ರೂ.1,50,000 ಪರಿಹಾರದ ರೂಪದಲ್ಲಿ ಕೃಷ್ಣ ಭಾಗ್ಯ ಜಲ ನಿಗಮಕ್ಕೆ ನೀಡಲು ಕೋರ್ಟ್ ಆದೇಶಿಸಿದೆ.