ಕರ್ನಾಟಕ

karnataka

ETV Bharat / state

ಪ್ರವಾಹದ ಅಬ್ಬರ: ತಾಲೂಕು ಕೇಂದ್ರಕ್ಕೆ ಬರಲು ಜನರ ಪರದಾಟ - Narayanapura reservoir

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಜನ ಸಂಪರ್ಕ ಕಡಿತಗೊಂಡಿದೆ. ಹಂಚಿನಾಳ, ಯಳಗುಂದಿ, ಕಡದರಗಡ್ಡಿ, ಯರಗೋಡಿ ನಡುಗಡ್ಡೆ ಗ್ರಾಮಸ್ಥರು ತಾಲೂಕು ಕೇಂದ್ರಕ್ಕೆ ಬರಲು ಪರದಾಡುತ್ತಿದ್ದಾರೆ.

Flood
Flood

By

Published : Aug 16, 2020, 3:15 PM IST

ಲಿಂಗಸುಗೂರು: ನಾರಾಯಣಪುರ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಹರಿ ಬಿಡುತ್ತಿದ್ದು, ನಡುಗಡ್ಡೆಯಲ್ಲಿ ವಾಸಿಸುತ್ತಿರುವ ಜನತೆ ಆತಂಕ ಎದುರಿಸುತ್ತಿದ್ದಾರೆ.

ನಾರಾಯಣಪುರ ಅಣೆಕಟ್ಟೆಯಿಂದ ಭಾನುವಾರ ಮಧ್ಯಾಹ್ನ ಅಣೆಕಟ್ಟೆ ಸಾಮರ್ಥ್ಯ 492.252 ಮೀಟರ್ ಪೈಕಿ 491.400 ಮೀಟರ್ ನೀರು ಕಾಯ್ದಿಟ್ಟು 18 ಕ್ರೆಸ್ಟ್ ಗೇಟ್‌ಗಳ ಮೂಲಕ 1,96,440 ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಹಂಚಿನಾಳ, ಯಳಗುಂದಿ ಕಡದರಗಡ್ಡಿ, ಯರಗೋಡಿ ನಡುಗಡ್ಡೆ ಗ್ರಾಮಸ್ಥರು ತಾಲೂಕು ಕೇಂದ್ರಕ್ಕೆ ಬರಲು ಪರದಾಡುತ್ತಿದ್ದಾರೆ.

ಕರಕಲಗಡ್ಡಿ, ಮ್ಯಾದರಗಡ್ಡಿ, ವಂಕಮ್ಮನಗಡ್ಡಿ ಪ್ರದೇಶದ ಭಾಗಶಃ ಜನತೆ ನಡುಗಡ್ಡೆಯಲ್ಲಿ ಇದ್ದು, ಪ್ರವಾಹ ಏಕಾಏಕಿ ಏರಿಕೆ, ಇಳಿಯುವಿಕೆಯಿಂದ ಭಯಗೊಂಡಿದ್ದಾರೆ ಎಂದು ಅವರೊಂದಿಗೆ ಸಂಪರ್ಕ ಹೊಂದಿರುವ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ABOUT THE AUTHOR

...view details