ಲಿಂಗಸುಗೂರು (ರಾಯಚೂರು): ನಗರದ ಬಸ್ ನಿಲ್ದಾಣ ವೃತ್ತ ಪೊಲೀಸ್ ಸಂಚಾರಿ ವೃತ್ತವಾಗಿ ಹೊಸ ರೂಪ ಪಡೆದುಕೊಂಡಿದೆ.
ಪೊಲೀಸ್ ಸಂಚಾರಿ ವೃತ್ತವಾಗಿ ಹೊಸ ರೂಪ ಪಡೆದ ನಗರದ ಬಸ್ ನಿಲ್ದಾಣ..! - ರಾಯಚೂರು ಲೇಟೆಸ್ಟ್ ಸುದ್ದಿ
ಸಿಪಿಐ ಮಹಾಂತೇಶ ಸಜ್ಜನ ಸ್ವಇಚ್ಛೆಯಿಂದ ವೃತ್ತಕ್ಕೆ ಅಧುನೀಕರಣದ ಸ್ಪರ್ಶ ನೀಡಿದ್ದಾರೆ. ಸಿಸಿ ಕ್ಯಾಮೆರಾಗಳನ್ನು ದುರಸ್ತಿಗೊಳಿಸಿ, ವೃತ್ತದ ಕಟ್ಟೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ. ಅದರ ಮೇಲೆ ಹೈಟೆಕ್ ಪೊಲೀಸ್ ಕಾವಲು ಸುರಕ್ಷತೆಗೆ ವೃತ್ತಾಕಾರದ ರಕ್ಷಣಾ ಗೋಪುರ ನಿರ್ಮಿಸಿದ್ದರಿಂದ ಜನರ ಕಣ್ಮನ ಸೆಳೆಯುತ್ತಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕು ಕೇಂದ್ರ ಬಸ್ ನಿಲ್ದಾಣದ ವೃತ್ತ ಸದಾ ವಾಹನ ಸಂಚಾರ ದಟ್ಟಣೆೆಯಿಂದ ಕೂಡಿರುತ್ತದೆ. ವೃತ್ತದಲ್ಲಿ ಹೈಮಾಸ್ಟ್ ಲೈಟಿಂಗ್ ಮತ್ತು ಸಿಸಿ ಕ್ಯಾಮೆರಾ ಅಳವಡಿಸಲು ಕಂಬವೊಂದನ್ನು ನೆಡಲಾಗಿತ್ತು. ಆ ಕಂಬ ಹಾಳಾಗಿ ಹೋಗಿತ್ತು. ಸಿಪಿಐ ಮಹಾಂತೇಶ ಸಜ್ಜನ ಸ್ವಇಚ್ಛೆಯಿಂದ ವೃತ್ತಕ್ಕೆ ಆಧುನೀಕರಣದ ಸ್ಪರ್ಶ ನೀಡಿದ್ದಾರೆ. ಸಿಸಿ ಕ್ಯಾಮೆರಾಗಳನ್ನು ದುರಸ್ತಿಗೊಳಿಸಿ, ವೃತ್ತದ ಕಟ್ಟೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ. ಅದರ ಮೇಲೆ ಹೈಟೆಕ್ ಪೊಲೀಸ್ ಕಾವಲು ಸುರಕ್ಷತೆಗೆ ವೃತ್ತಾಕಾರದ ರಕ್ಷಣಾ ಗೋಪುರ ನಿರ್ಮಿಸಿದ್ದರಿಂದ ಜನರ ಕಣ್ಮನ ಸೆಳೆಯುತ್ತಿದೆ.