ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ತೋರಲಬಂಚಿ ಗ್ರಾಮದ ಭೀಮಪ್ಪ ಸಿಂಗೋಜಿಯನ್ನು (37) ಕೊಲೆ ಮಾಡಿ ಆಸ್ಪತ್ರೆಗೆ ದಾಖಲಿಸಿ ಆರೋಪಿಗಳು ಪರಾರಿಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಗುಂಪು ಕಟ್ಟಿಕೊಂಡು ಗಂಡನನ್ನು ಕೊಂದ ಮಹಿಳೆ: ಆಸ್ಪತ್ರೆಗೆ ದಾಖಲಿಸಿ ಪರಾರಿ - Lingasugur police station in Raichur district
ವ್ಯಕ್ತಿಯನ್ನು ಕೊಂದು ಆರೋಪಿಗಳೇ ಆತನನ್ನು ಆಸ್ಪತ್ರೆಗೆ ಸೇರಿಸಿ ಪರಾರಿಯಾಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ವ್ಯಕ್ತಿಯ ಕೊಲೆಗೈದು ಅಪಘಾತವೆಂದು ಬಿಂಬಿಸಲು ಯತ್ನ
ಭೀಮಪ್ಪ ಸಿಂಗೋಜಿಯನ್ನು ಎರಡು ದಿನಗಳ ಹಿಂದೆ ಮೊಹರಂ ಹಬ್ಬಕ್ಕೆಂದು ಕರೆದು ಗುಂಪುಗೂಡಿದ ಮಾಳಿಂಗರಾಯ, ಹನುಮಪ್ಪ, ದ್ಯಾಮವ್ವ (ಹೆಂಡತಿ), ಮಸಿಗೆಪ್ಪ, ಗದ್ದೆವ್ವ, ಬಂಡಾರೆಪ್ಪ, ಬಸವರಾಜ ಸೇರಿ ಕೊಲೆ ಮಾಡಿದ್ದಾರೆ ಎಂಬ ಆರೋಪಿಸಲಾಗಿದೆ.
ಈ ಸಂಬಂಧ ಮೃತನ ತಂದೆ ಸಂಗಪ್ಪ ಸಿಂಗೋಜಿ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
Last Updated : Sep 2, 2020, 11:22 AM IST