ಲಿಂಗಸುಗೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ಉಪ ನೋಂದಣಾಧಿಕಾರಿ ಕಚೇರಿಗೆ ಕೋವಿಡ್ ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬ ಬಂದು ಹೋಗಿದ್ದರಿಂದ ಸೀಲ್ಡೌನ್ ಮಾಡಲಾಗಿದೆ.
ಲಿಂಗಸುಗೂರು ಉಪ ನೋಂದಣಾಧಿಕಾರಿ ಕಚೇರಿ ಸೀಲ್ಡೌನ್ - ಉಪ ನೋಂದಣಾಧಿಕಾರಿ ಕಚೇರಿ ಸೀಲ್ ಡೌನ್
ಕೋವಿಡ್ ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬ ಬಂದು ಹೋಗಿದ್ದರಿಂದ ಲಿಂಗಸುಗೂರು ಉಪ ನೋಂದಣಾಧಿಕಾರಿ ಕಚೇರಿ ಸೀಲ್ ಡೌನ ಮಾಡಲಾಗಿದೆ.
ಲಿಂಗಸುಗೂರು ಉಪ ನೋಂದಣಾಧಿಕಾರಿ ಕಚೇರಿ ಸೀಲ್ ಡೌನ್
ಲಿಂಗಸುಗೂರು ತಾಲೂಕಿನ ಮುದಗಲ್ಲ(ಮೇಗಳಪೇಟೆ) ಕೋವಿಡ್ ಪೀಡಿತೆ ಸಂಬಂಧಿ 4 ದಿನಗಳ ಹಿಂದೆ ಉಪ ನೋಂದಣಾಧಿಕಾರಿ ಕಚೇರಿಗೆ ಆಗಮಿಸಿ ದಾಖಲೆ ಒಂದಕ್ಕೆ ರುಜು ಹಾಕಿರುವುದು ಟ್ರಾವಲಿಂಗ್ ಹಿಸ್ಟರಿಯ ಆಧಾರದ ಮೇಲೆ ತಿಳಿದಿದೆ. ಹಾಗಾಗಿ ರಾಸಾಯನಿಕ ದ್ರಾವಣ ಸಿಂಪಡಣೆ ಮಾಡಿ ಕಚೇರಿಯನ್ನು ಸೀಲ್ಡೌನ್ ಮಾಡಲಾಗಿದೆ.
ಮೇಗಳಪೇಟೆ ಮತ್ತು ಅಡವಿಭಾವಿ ತಾಂಡಾ ಕೋವಿಡ್ ಸೋಂಕಿತರು ತಾಲೂಕಿನ ಕೆಲ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದರು. ಆ ಆಸ್ಪತ್ರೆಗಳನ್ನು ಸೀಕ್ ಡೌನ್ ಮಾಡುತ್ತಾರೋ ಇಲ್ಲವೊ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ.