ರಾಯಚೂರು:ಚಲಿಸುತ್ತಿದ್ದ ಲಿಫ್ಟ್ ಕೆಟ್ಟುನಿಂತ ಪರಿಣಾಮ ಕೆಲ ಕಾಲ ರೋಗಿಗಳು ಪರದಾಡಿರುವ ಘಟನೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ನಗರದ ಹೊರವಲಯದಲ್ಲಿರುವ ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ, ಆಸ್ಪತ್ರೆಗೆ ಬರುವವರಿಗೆ ಮಹಡಿ ಮೇಲೆ ತೆರಳಲು ಅನುಕೂಲಕ್ಕಾಗಿ ಲಿಫ್ಟ್ ಅಳವಡಿಸಲಾಗಿದೆ. ನಿನ್ನೆ ಲಿಫ್ಟ್ ಮೇಲಿಂದ ಕೆಳಗೆ ಬರುವ ವೇಳೆ ಏಕಾಏಕಿ ಕೆಟ್ಟು ನಿಂತಿದೆ. ಈ ವೇಳೆ ಕೆಲಕಾಲ ಲಿಫ್ಟ್ನಲ್ಲಿರುವವರು ಆತಂಕಕ್ಕೆ ಒಳಗಾಗಿ, ಹೈರಾಣಾಗಿದ್ದಾರೆ.
ರಿಮ್ಸ್‌ನಲ್ಲಿ ಕೈ ಕೊಟ್ಟ ಲಿಫ್ಟ್ ಲಿಫ್ಟ್ ಕೆಟ್ಟು ನಿಂತು ಜನರು ಸಿಲುಕಿಕೊಂಡಿರುವ ಸುದ್ದಿ ತಿಳಿದ ಹೋಮ್ ಗಾರ್ಡ್ ಲಿಫ್ಟ್ ಮೇಲ್ಭಾಗದಿಂದ ಒಬ್ಬೊಬ್ಬರನ್ನ ಹೊರಗಡೆ ಸುರಕ್ಷಿತವಾಗಿ ಕರೆತಂದಿದ್ದಾರೆ. ಇನ್ನೂ ರಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯ ಘಟನೆಗೆ ಕಾರಣವೆಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತು ರಿಮ್ಸ್ ನಿರ್ದೇಶಕ ಡಾ. ಬಸವರಾಜ ಪೀರಾಪುರಿ ದೂರವಾಣಿ ಮೂಲಕ ಮಾತನಾಡಿ, ವಿದ್ಯುತ್ ಹೋಗಿದ್ದರಿಂದ ಈ ಘಟನೆ ನಡೆದಿದೆ. ವಿಷಯ ತಿಳಿದ ಕೂಡಲೇ ಹೋಮ್ ಗಾರ್ಡ್ ಲಿಫ್ಟ್ನಲ್ಲಿರುವವರನ್ನ ಸುರಕ್ಷಿತವಾಗಿ ಹೊರಗೆ ಕರೆ ತಂದಿದ್ದಾರೆ ಎಂದರು.