ಕರ್ನಾಟಕ

karnataka

ETV Bharat / state

ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಡಿ ಎಸ್ ಹೂಲಗೇರಿ

ಶಾಸಕರು ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ₹4 ಲಕ್ಷದಲ್ಲಿ ಅಂಕನಾಳದ ದುರ್ಗಮ್ಮ ದೇವಸ್ಥಾನದ ಮೇಲ್ಛಾವಣಿ ಹಾಕುವ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಕಾಮಗಾರಿ ಗುಣಮಟ್ಟ ಕಾಪಾಡಿಕೊಳ್ಳಲು ಗುತ್ತಿಗೆದಾರರಿಗೆ ಸಲಹೆ ನೀಡಿದರು..

lingasuguru
ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ

By

Published : Jun 24, 2020, 3:09 PM IST

ಲಿಂಗಸುಗೂರು :ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಸಜ್ಜಲಗುಡ್ಡದಲ್ಲಿ ಶಾಸಕ ಡಿ ಎಸ್ ಹೂಲಗೇರಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಿದರು. ಕೃಷ್ಣ ಭಾಗ್ಯ ಜಲ ನಿಗಮದ 2019-20ನೇ ಸಾಲಿನ ಎಡಬ್ಲ್ಯೂಡಿ ಯೋಜನೆಯಡಿ ಸಜ್ಜಲಗುಡ್ಡದಲ್ಲಿ ₹45 ಲಕ್ಷದಲ್ಲಿಸ್ವಾಗತ ಕಮಾನು ಹಾಗೂ ರಾಂಪೂರದಲ್ಲಿ ₹40 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ಮತ್ತು ಅಂಕನಾಳದಲ್ಲಿ ಎನ್​ಸಿಪಿ ಯೋಜನೆಯಡಿ ₹20 ಲಕ್ಷದ ಸಮುದಾಯ ಭವನಕ್ಕೆ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿದರು.

ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಡಿ ಎಸ್ ಹೂಲಗೇರಿ

ಶಾಸಕರು ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ₹4 ಲಕ್ಷದಲ್ಲಿ ಅಂಕನಾಳದ ದುರ್ಗಮ್ಮ ದೇವಸ್ಥಾನದ ಮೇಲ್ಛಾವಣಿ ಹಾಕುವ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಕಾಮಗಾರಿ ಗುಣಮಟ್ಟ ಕಾಪಾಡಿಕೊಳ್ಳಲು ಗುತ್ತಿಗೆದಾರರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಜ್ಜಲಗುಡ್ಡದ ದೊಡ್ಡಬಸವಾರ್ಯ ಸ್ವಾಮೀಜಿ ಸೇರಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಮುಖಂಡರು ಭಾಗವಹಿಸಿದ್ದರು.

ABOUT THE AUTHOR

...view details