ರಾಯಚೂರು:ರಾಜ್ಯಸಭಾ ಸದಸ್ಯ ದಿ.ಅಶೋಕ ಗಸ್ತಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಇದೀಗ ದಿ.ಅಶೋಕ ಗಸ್ತಿ ಪತ್ನಿ ಸುಮಾ ಗಸ್ತಿಗೆ ಬಿಜೆಪಿ ಟಿಕೆಟ್ ನೀಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಅಶೋಕ್ ಗಸ್ತಿ ಪತ್ನಿ ಸುಮಾ ಗಸ್ತಿಗೆ ಟಿಕೆಟ್ ನೀಡುವಂತೆ ಒತ್ತಡ! - bjp candidate for upper house election news
ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು, ಮೃತ ಅಶೋಕ್ ಗಸ್ತಿ ಪತ್ನಿಗೇ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಒತ್ತಾಯ ಕೇಳಿ ಬಂದಿದೆ.
ಸಾಮಾನ್ಯ ಕಾರ್ಯಕರ್ತ ಹಾಗೂ ಹಿಂದುಳಿದ ವರ್ಗದಿಂದ ಗುರುತಿಸಿಕೊಂಡು ಅಶೋಕ ಗಸ್ತಿ ಬಿಜೆಪಿ ಹೈಕಮಾಂಡ್ ರಾಜ್ಯಸಭಾ ಟಿಕೆಟ್ ನೀಡುವ ಮೂಲಕ ಚುನಾವಣೆ ಸ್ಪರ್ಧಿಸಲು ಅವಕಾಶ ಕಲ್ಪಿಸಿತ್ತು. ಅದರಂತೆ ಚುನಾವಣೆ ಇಲ್ಲದೇ ಅವಿರೋಧವಾಗಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ರು.
ಸಾಮಾನ್ಯ ಕಾರ್ಯಕರ್ತನಿಂದ ಗುರುತಿಸಿಕೊಂಡು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಅಧಿಕಾರವನ್ನ ಬಳಸಿಕೊಂಡು ಅಭಿವೃದ್ದಿ ಕಾರ್ಯ ನಡೆಸಬೇಕು ಎನ್ನುವ ಯೋಜನೆ ರೂಪಿಸಿಕೊಂಡಿದ್ರು. ಆದ್ರೆ ಕೊರೊನಾ ಸೋಂಕಿಗೆ ಬಲಿಯಾದರು. ಇದೀಗ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು, ಸವಿತಾ ಸಮಾಜದಿಂದ ಅಶೋಕ ಗಸ್ತಿ ಅವರ ಪತ್ನಿಗೆ ರಾಜ್ಯಸಭಾ ಸದಸ್ಯರನ್ನ ಮಾಡಬೇಕು ಎನ್ನುವ ಕೂಗು ಬಲವಾಗಿ ಕೇಳಿ ಬಂದಿದೆ.
ಇತ್ತ ಬಿಜೆಪಿ ಯಾರನ್ನು ಚುನಾವಣಾ ಕಣಕ್ಕಿಳಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ. ಅಲ್ಲದೇ ಈ ಸಂಬಂಧ ಬಿಜೆಪಿ ನ.5ರಂದು ಸಭೆ ಕರೆದಿದ್ದು, ಸಭೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ತಿರ್ಮಾನ ಕೈಗೊಳ್ಳಲಿದೆ. ಕಳೆದ ಬಾರಿ ಹಿಂದುಳಿದ ವರ್ಗಕ್ಕೆ ಸೇರಿದ ಹಾಗೂ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸುವ ಮೂಲಕ ಅಶೋಕ ಗಸ್ತಿಯವರಿಗೆ ಅವಕಾಶ ನೀಡಿದ್ರು. ಈ ಬಾರಿ ಸಹ ಅದೇ ತಂತ್ರ ಅನುಸರಿಸುವ ಮೂಲಕ ಅಭ್ಯರ್ಥಿ ಸ್ಪರ್ಧೆಗೆ ಅವಕಾಶ ಕಲ್ಪಿಸುತ್ತದೆಯೋ ಅಥವಾ ದಿ.ಅಶೋಕ ಗಸ್ತಿಯವರ ಪತ್ನಿ ಟಿಕೆಟ್ ನೀಡುತ್ತಾ ಎನ್ನುವುದು ಕಾದು ನೋಡಬೇಕಾಗಿದೆ.
ದಿ.ಅಶೋಕ ಗಸ್ತಿ ಪತ್ನಿ ಸುಮಾ ಗಸ್ತಿ ಹೇಳಿಕೆ:
ಬಿಜೆಪಿ ಹೈಕಮಾಂಡ್ ಸೂಚಿಸಿದ್ರೆ ನಾನು ರಾಜ್ಯಸಭಾ ಸದಸ್ಯೆಯಾಗಲು ಸಿದ್ಧವಿದ್ದೇನೆ. ಅಶೋಕ ಗಸ್ತಿ ಅವರು ರಾಜಕೀಯ ಕಳಕಳಿ ಹಾಗೂ ಅವರು ಹಾಕಿಕೊಂಡಿದ್ದ ಅಭಿವೃದ್ಧಿ ಯೋಜನೆಗಳನ್ನು ಸಕಾರಗೊಳಿಸುವುದು, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇನೆ. ಮುಖ್ಯವಾಗಿ ಮಹಿಳೆಯಾಗಿರುವುದರಿಂದ ಅದನ್ನ ನಿಭಾಯಿಸುತ್ತಾನೆ.