ಕರ್ನಾಟಕ

karnataka

ETV Bharat / state

ಜೀವನ ಸಾಗಿಸಲು ಭಿಕ್ಷಾಟನೆಗೆ ಮುಂದಾದ ವೇಷಗಾರ ಕುಟುಂಬ - raichur latest news

ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿರುವ ಪದ್ಮಾವತಿ ಕಾಲೋನಿಯಲ್ಲಿ ವಾಸಿಸುತ್ತಿರುವ 20 ಕ್ಕೂ ಹೆಚ್ಚು ವೇಷಗಾರ ಕುಟುಂಬಗಳು ಲಾಕ್​ಡೌನ್​ನಿಂದಾಗಿ ಬೀದಿಗೆ ಬಿದ್ದಿವೆ.

lackdown effect
ಲಾಕ್‌ಡೌನ್ ಎಫೆಕ್ಟ್

By

Published : May 16, 2020, 6:59 PM IST

ರಾಯಚೂರು : ಲಾಕ್​ಡೌನ್​ನಿಂದಾಗಿ ಸ್ಟೇಷನರಿ ವಸ್ತುಗಳನ್ನು ಮಾರಾಟ ಮಾಡಿ ಬದುಕು ಸಾಗಿಸುತ್ತಿರುವ 20 ಕ್ಕೂ ಹೆಚ್ಚು ಕುಟುಂಬಗಳು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ, ಇದೀಗ ಅವರು ಭಿಕ್ಷಾಟನೆ ಮಾಡಿ ಬದುಕುವಂತಾಗಿದೆ.

ನಗರದ ಆಶಾಪುರ ರಸ್ತೆಯಲ್ಲಿನ ಪದ್ಮಾವತಿ ಕಾಲೋನಿಯಲ್ಲಿ ವೇಷಗಾರ ಕುಟುಂಬಗಳೆಂದು 20 ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿವೆ. ಈ ಕುಟುಂಬಗಳು, ಬಿಂದಿಗೆ, ಬಟ್ಟೆ, ಸ್ಟೇಷನರಿ ವಸ್ತುಗಳನ್ನ ಸೇರಿದಂತೆ ಸಣ್ಣ ಪುಟ್ಟ ವಸ್ತುಗಳನ್ನ ಗ್ರಾಮೀಣ ಪ್ರದೇಶ, ನಗರ, ಪಟ್ಟಣಗಳಲ್ಲಿ ಮಾರಾಟ ಮಾಡಿ, ಬಂದ ಆದಾಯದಿಂದ ಜೀವನ ಸಾಗಿಸುತ್ತಿದ್ರು.

ಇದೀಗ ಲಾಕ್‌ಡೌನ್​ನಿಂದಾಗಿ ವ್ಯಾಪಾರವಿಲ್ಲ. ಕೊರೊನಾ ಭೀತಿಯಿಂದಾಗಿ ವ್ಯಾಪಾರಕ್ಕೆ ಬರದಂತೆ ಹೇಳುತ್ತಿದ್ದಾರೆ. ಇದರಿಂದಾಗಿ ಈ ಕುಟುಂಬಗಳು ಊಟಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಲಾಕ್‌ಡೌನ್ ಎಫೆಕ್ಟ್

ಚಿಕ್ಕ ಮಕ್ಕಳು, ಮಹಿಳೆಯರು ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದೇವೆ. ನಮಗೆ ಯಾರಾದರೂ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ABOUT THE AUTHOR

...view details