ಕರ್ನಾಟಕ

karnataka

ETV Bharat / state

ರಾಯಚೂರು ಓಪೆಕ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಆರೋಪ - OPEK covid Hospital

ಜಿಲ್ಲೆಯ ಓಪೆಕ್ ಕೋವಿಡ್ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಸೋಂಕಿತರು ಆಕ್ಸಿಜನ್ ಇಲ್ಲದೆ ತೊಂದರೆ ಅನುಭವಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Raichur
ಅವ್ಯವಸ್ಥೆಯ ಆಗರವಾದ ಓಪೆಕ್ ಕೋವಿಡ್ ಆಸ್ಪತ್ರೆ

By

Published : May 17, 2021, 10:40 AM IST

ರಾಯಚೂರು:ಜಿಲ್ಲೆಯ ಓಪೆಕ್ ಕೋವಿಡ್​ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಓಪೆಕ್ ಕೋವಿಡ್ ಆಸ್ಪತ್ರೆ

ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ಸೋಂಕಿತನೋರ್ವನಿಗೆ ಆಸ್ಪತ್ರೆಯ ಸಿಬ್ಬಂದಿ ಆಕ್ಸಿಜನ್ ನೀಡಲು ಸಿಲಿಂಡರ್ ತಂದಿದ್ದಾರೆ. ಆದ್ರೆ ಅದು ಖಾಲಿಯಾಗಿದ್ದರಿಂದ ಸೋಂಕಿತ ಆಕ್ಸಿಜನ್ ಕೊರತೆ ಎದುರಾಗಿ ತೊಂದರೆ ಅನುಭವಿಸಿದ್ದಾನೆ ಎಂದು ಆರೋಪಿಸಲಾಗಿದೆ. ಜತೆಗೆ ಅದರ ದೃಶ್ಯವನ್ನು ಕೂಡ ಸೆರೆ ಹಿಡಿಯಲಾಗಿದೆ.

ಆಸ್ಪತ್ರೆಯಲ್ಲಿನ ಹವಾ ನಿಯಂತ್ರಿತ ಕೊಠಡಿಗಳಲ್ಲಿ ಹವಾನಿಯಂತ್ರಿಕ ಮಷಿನ್ ಕೆಟ್ಟು ಹೋಗಿದ್ದು, ರೋಗಿಗಳು ಟೇಬಲ್ ಫ್ಯಾನ್‌ಗಳನ್ನು ಬಳಸಬೇಕಿದೆ. ಅಲ್ಲದೇ ರಾತ್ರಿ ವೇಳೆ ಚಿಕಿತ್ಸೆಗೆ ಬರುವವರಿಗೆ ಸೂಕ್ತವಾದ ಚಿಕಿತ್ಸೆ ಹಾಗೂ ಬೆಡ್​​ಗಳು ಸಿಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಇದನ್ನೂ ಓದಿ:"ಸಾಯುವವರು ಎಲ್ಲಾದರೂ ಸಾಯಲಿ, ನಾನು ಆಸ್ಪತ್ರೆ ನಿರ್ಮಿಸಲು ಬಿಡಲ್ಲ": ಶಾಸಕ ಚಂದ್ರಪ್ಪ ಹೇಳಿಕೆ ವೈರಲ್

ABOUT THE AUTHOR

...view details