ರಾಯಚೂರು: ಹಲವು ದಶಕಗಳ ಹೋರಾಟದ ಫಲವಾಗಿ ಜಿಲ್ಲೆಯಲ್ಲಿ ನೂತನ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಆದರೆ ವಿವಿಗೆ ಹಣದ ಕೊರತೆ ಎದುರಾಗಿದ್ದು, ಈ ಬಾರಿ ರಾಜ್ಯ ಬಜೆಟ್ನಲ್ಲಿ ಅನುದಾನ ನಿರೀಕ್ಷಿಸಲಾಗಿದೆ.
ನೂತನ ರಾಯಚೂರು ವಿವಿಗೆ ಅನುದಾನ ಕೊರತೆ: ರಾಜ್ಯ ಬಜೆಟ್ನಲ್ಲಿ ಸಿಗುವುದೇ ಫಂಡ್? - Raichur
ರಾಯಚೂರು ವಿವಿಗೆ ಸಂಬಂಧಿಸಿದ ಅಧಿಕಾರಿಗಳು ಬೇಕಾಗುವ ಅನುದಾನ, ಕೈಗೊಳ್ಳಬೇಕಾದ ಕಾರ್ಯದ ಬಗ್ಗೆ ಪ್ರಸ್ತಾವನೆಯನ್ನ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಿದ್ದಾರೆ. 600 ಕೋಟಿ ರೂಪಾಯಿ ನೀಡುವಂತೆ ಕೋರಲಾಗಿದೆ. ಇದಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅನುದಾನ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ವಿವಿಯ ಕುಲಪತಿ ಹರೀಶ್ ರಾಮಸ್ವಾಮಿ.

ಕಲ್ಯಾಣ ಕರ್ನಾಟಕ (ಹೈದರಾಬಾದ್-ಕರ್ನಾಟಕ) ಭಾಗದ 6 ಜಿಲ್ಲೆಗಳ ಪೈಕಿ ರಾಯಚೂರು ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶವೆಂದು ಡಾ. ನಂಜುಡಪ್ಪ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಜಿಲ್ಲೆಗೆ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂದು ಜಿಲ್ಲೆಯ ಜನತೆ ಹಲವು ವರ್ಷಗಳ ಒತ್ತಾಯಿಸುತ್ತಾ ಬಂದಿದ್ದರು. ಹೋರಾಟದ ಫಲವಾಗಿ ಈ ಹಿಂದಿನ ಸರ್ಕಾರ ನಗರದ ಹೊರವಲಯದಲ್ಲಿ ಯರಗೇರಾ ಬಳಿಯ ಗುಲ್ಬರ್ಗಾ ವಿಶ್ವವಿದ್ಯಾಲಯದ ಅಧಿನದಲ್ಲಿನ ಪಿಜಿ ಸೆಂಟರ್ನಲ್ಲಿ ರಾಯಚೂರು, ಯರಗೇರಾ ಒಳಗೊಂಡತೆ ನೂತನ ವಿಶ್ವವಿದ್ಯಾಲಯವನ್ನು ಸರ್ಕಾರ ಘೋಷಣೆ ಮಾಡಿತ್ತು.
ಆದರೆ ಇದುವರೆಗೆ ವಿವಿ ಸ್ಥಾಪನೆಗೆ ಅವಶ್ಯಕತೆಗೆ ಅನುಗುಣವಾಗಿ ಅನುದಾನ ಕಲ್ಪಿಸಿಲ್ಲ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2021-2022ನೇ ಸಾಲಿಗೆ ಮಂಡಿಸುವ ಆಯವ್ಯಯದಲ್ಲಿ ನೂತನ ವಿವಿಗೆ ಅನುದಾನ ನೀಡುವ ನಿರೀಕ್ಷೆ ಇದೆ. ಕಟ್ಟಡ, ಕಚೇರಿ, ಮೂಲಭೂತ ಸೌಕರ್ಯ, ವಸತಿ ನಿಲಯ, ಆಡಳಿತ ಕಚೇರಿ, ಮೂರ್ತಿಗಳು, ಲ್ಯಾಬ್, ಸಿಬ್ಬಂದಿ ಹಾಗೂ ಅಧಿಕಾರಿಗಳು, ವಸತಿ ಗೃಹಗಳು, ಅತಿಥಿ ಗೃಹಗಳು, ಉಪನ್ಯಾಸಕರ ನೇಮಕ ಸೇರಿದಂತೆ ಹೊಸ ವಿವಿಗೆ ಅವಶ್ಯಕ ಅನುದಾನ ಬೇಕಾಗಿದೆ.