ರಾಯಚೂರು:ಜಿಲ್ಲೆಯ ಲಿಂಗಸುಗೂರು ತಾಲೂಕು ಸರ್ಜಾಪುರ ಬಳಿಯ ಪ್ರೌಢಶಾಲೆಯಲ್ಲಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಆರಂಭಕ್ಕೆ ಕುಪ್ಪಿಗುಡ್ಡ-ಸರ್ಜಾಪುರ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ಗೆ ಕುಪ್ಪಿಗುಡ್ಡ - ಸರ್ಜಾಪುರ ಸ್ಥಳೀಯರು ವಿರೋಧ - ರಾಯಚೂರು ಇನ್ಸ್ಟಿಟ್ಯೂಶನಲ್ ಕ್ವಾರಂಟೈನ್ ವಿರೋಧ
ಗುರುವಾರ ಗೋವಾದಿಂದ ಬಂದ ಕಾರ್ಮಿಕರನ್ನ ರಾಯಚೂರು ಜಿಲ್ಲೆಯ ಸರ್ಜಾಪುರ ಬಳಿಯಿರುವ ಪ್ರೌಢಶಾಲೆಯಲ್ಲಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಢಲು ನಿರ್ಧರಿಸಲಾಗಿದ್ದು, ಇದಕ್ಕೆ ಕುಪ್ಪಿಗುಡ್ಡ-ಸರ್ಜಾಪುರ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
![ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ಗೆ ಕುಪ್ಪಿಗುಡ್ಡ - ಸರ್ಜಾಪುರ ಸ್ಥಳೀಯರು ವಿರೋಧ Kuppigudda-Sarjapur natives Opposition for Institutional Quarantine](https://etvbharatimages.akamaized.net/etvbharat/prod-images/768-512-7191856-709-7191856-1589438721543.jpg)
ಇನ್ಸ್ಟಿಟ್ಯೂಶನಲ್ ಕ್ವಾರಂಟೈನ್ ಕುಪ್ಪಿಗುಡ್ಡ-ಸರ್ಜಾಪುರ ಸ್ಥಳೀಯರು ವಿರೋಧ
ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ಗೆ ಕುಪ್ಪಿಗುಡ್ಡ-ಸರ್ಜಾಪುರ ಸ್ಥಳೀಯರು ವಿರೋಧ
ಗುರುವಾರ ಗೋವಾದಿಂದ ಸರ್ಜಾಪುರಕ್ಕೆ ಆಗಮಿಸಿದ ಕಾರ್ಮಿಕರನ್ನ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯರು, ಇಲ್ಲಿ ಕೂಲಿಕಾರ್ಮಿಕರಿಗೆ ಇರಲು ಅಗತ್ಯ ಸೌಲಭ್ಯವಿಲ್ಲ. ಇದರಿಂದ ಕುಪ್ಪಿಗುಡ್ಡ - ಸರ್ಜಾಪುರ ಗ್ರಾಮದ ಜನತೆಗೆ ತೊಂದರೆಯಾಗಲಿದೆ ಎಂದು ಆರೋಪಿಸಿದರು.
ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಸ್ಥಳ ಬದಲಾವಣೆ ಮಾಡಿ, ಎರಡು ಗ್ರಾಮಸ್ಥರ ಆರೋಗ್ಯ ರಕ್ಷಣೆಗೆ ಮುಂದಾಗದಿದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.