ಕರ್ನಾಟಕ

karnataka

ETV Bharat / state

ಕೆಎಸ್​ಆರ್​ಟಿಸಿ ವಿರುದ್ಧ ಕಿರುಕುಳ ಆರೋಪ, ಬೇಡಿಕೆಗಳ ಈಡೇರಿಕೆಗೆ ಒತ್ತಾಯ - avb

ಕೆಎಸ್​ಆರ್​ಟಿಸಿ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮೇಲೆ ಕಿರುಕುಳ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಫೆಡರೇಶನ್​​ನ ಸಂಚಾಲಕ ಶ್ರೀಶೈಲಗೌಡ

By

Published : May 25, 2019, 11:28 PM IST

ರಾಯಚೂರು: ಕೆಎಸ್​ಆರ್​ಟಿಸಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಮೇಲೆ ಕಿರುಕುಳ ನಡೆಯುತ್ತಿದೆ.ನಿಗದಿತ ಸಮಯಕ್ಕಿಂತ ಹೆಚ್ಚಿನ ಶ್ರಮ, ಅಧಿಕ ಕೆಲಸದೊತ್ತಡ ಸೇರಿ ಮಾನಸಿಕ ಹಿಂಸೆ ಅನುಭವಿಸಿದರೂ ಪ್ರಶ್ನೆ ಮಾಡದಂತಾಗಿದೆ. ಈ ಮೂಲಕ ಅನ್ಯಾಯ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಫೆಡರೇಶನ್​​ನ ಸಂಚಾಲಕ ಶ್ರೀಶೈಲಗೌಡ


ಸಾರಿಗೆ ಸಂಸ್ಥೆಯ ಸಿಬ್ಬಂದಿ ಮೇಲೆ ಈ ಹಿಂದಿಗಿಂತ ಹೆಚ್ಚು ಕಾರ್ಯಾಭಾರ ಹೇರಲಾಗಿದೆ. 8 ಗಂಟೆ ಕೆಲಸದ ಅವಧಿಯನ್ನು 12 ಗಂಟೆಯವರೆಗೆ ಹೇರಲಾಗುತ್ತಿದೆ. ಈ ಮೂಲಕ ಎಮ್.ಟಿ.ಡಬ್ಲ್ಯೂ ಆ್ಯಕ್ಟ್ ಉಲ್ಲಂಘನೆ ಮಾಡಲಾಗ್ತಿದೆ. ವಿವಿಧ ಬಗೆಯ ಕೆಲಸದ ಒತ್ತಡದಿಂದ‌ ಅನೇಕ ಸಿಬ್ಬಂದಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ಟಾರ್ಗೆಟ್ ಮಾಡಲಾಗುತ್ತಿದೆ. ಅಲ್ಲದೇ ಫೆಡರೇಶನ್​ಗಳ ಹಕ್ಕು ಪಡೆಯಲು ಅನ್ಯಾಯದ ವಿರುದ್ಧ ಹೋರಾಟಕ್ಕೆ ಮುಂದಾದರೆ ಕರ್ತವ್ಯ ಲೋಪದ ಪಟ್ಟ ಕಟ್ಟಿ ಕ್ರಮಕ್ಕೆ ಮುಂದಾಗುತ್ತಿದ್ದಾರೆ. ಆ ಮೂಲಕ ಸಂಘಟನೆಗಳ ಹತೋಟಿಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ಕೆಎಸ್​ಆರ್​ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ದೂರಿದೆ.

ಸಂಸ್ಥೆಯ ಸಿಬ್ಬಂದಿ ಮೇಲೆ ಆಗುತ್ತಿರುವ ಅನ್ಯಾಯದ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಫೆಡರೇಶನ್​​ನ ಸಂಚಾಲಕ ಶ್ರೀಶೈಲಗೌಡ, ಕೆಎಸ್​ಆರ್​ಟಿಸಿ ನಾಲ್ಕು ನಿಗಮಗಳಾಗಿ ವಿಭಜನೆಯಾದ ಮೇಲೆ ನಷ್ಟದ ಪ್ರಮಾಣ ಹಾಗೂ ಭ್ರಷ್ಟಾಚಾರ ಹೆಚ್ಚಾಗಿದೆ. ಆದ್ರೆ, ಸಂಸ್ಥೆಯ ನೌಕರರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗಿಲ್ಲ. ಕಡಿಮೆ ಸಿಬ್ಬಂದಿ ಹೆಚ್ಚು ಒತ್ತಡ,ವರ್ಗಾವಣೆ,ವೇತನ ಸಮಸ್ಯೆ ಹೆಚ್ಚಾಗಿದೆ ಎಂದು ದೂರಿದರು.

ರಾಜ್ಯ ಮಟ್ಟದ ಕೇಂದ್ರೀಯ ಕಾರ್ಯಕಾರಿ ಸಮಿತಿ ಸಭೆ ಬೆಂಗಳೂರಿನಲ್ಲಿ ಏಪ್ರಿಲ್ 2,3,4 ರಂದು ನಡೆದ ಕಲಬುರ್ಗಿಸಮ್ಮೇಳನದ ತೀರ್ಮಾನಗಳನ್ನು ಜಾರಿಗೊಳಿಸಲು ಕಾರ್ಮಿಕರ ಸಮಸ್ಯೆ, ಆರೋಗ್ಯ, ವೈದ್ಯಕೀಯ ಸವಲತ್ತುಗಳ ಬಗ್ಗೆ ಬೇಡಿಕೆಗಳನ್ನು ಮುಂದಿಟ್ಟರೂ, ಸರ್ಕಾರ ಹಾಗೂ ಜನ ಪ್ರತಿನಿಧಿಗಳು ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕಾರ್ಮಿಕರು,ಸಿಬ್ಬಂದಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಇದೇ 28ರಂದು ವಿಭಾಗೀಯ ಕಚೇರಿ ಮುಂದೆ ಧರಣಿ ನಡೆಸಲಾಗುತ್ತಿದ್ದು,ನಮ್ಮ ಹೋರಾಟಕ್ಕೆ ಸ್ಪಂದಿಸದಿದ್ದರೆ ಜೂನ್‌ 7ರಂದು ಬೆಂಗಳೂರು ಚಲೋ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

For All Latest Updates

TAGGED:

avb

ABOUT THE AUTHOR

...view details