ರಾಯಚೂರು:ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಒಂದಾದರೆ ಕಾಂಗ್ರೆಸ್ ಸಹಿಸುವುದಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ ಪ್ರಗತಿ ಪರಿಶೀಲನೆ ಸಭೆ ವೇಳೆ ಮಾತನಾಡುತ್ತಾ, ಶಾಸಕ ವೆಂಕಟರಾವ್ ನಾಡಗೌಡರಿಗೆ ನಾವು ಒಳ್ಳೆಯ ಕೆಲಸ ಮಾಡುವಾಗ ಕೇಳುವುದಿಲ್ಲ, ತಪ್ಪುಗಳಿದ್ದರೆ ಅದನ್ನು ಕುಮಾರಸ್ವಾಮಿಗೆ ಹೇಳುತ್ತಾರೆ ಎಂದರು.
ಬಿಜೆಪಿ-ಜೆಡಿಎಸ್ ಒಂದಾಗುವುದನ್ನು ಕಾಂಗ್ರೆಸ್ ಸಹಿಸಲ್ಲ: ಸಚಿವ ಈಶ್ವರಪ್ಪ - KS Eshwarappa
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಗತಿ ಪರಿಶೀಲನೆ ಸಭೆಯ ವೇಳೆ ಮತ್ತೆ ಬಿಜೆಪಿ-ಜೆಡಿಎಸ್ ಮೈತ್ರಿ ಮುನ್ನೆಲೆಗೆ ಬಂದಿದ್ದು, ಕಾಂಗ್ರೆಸ್ ಶಾಸಕರಿಗೆ ಈಶ್ವರಪ್ಪ ಟಾಂಗ್ ನೀಡಿದ್ದಾರೆ.

ಸಚಿವ ಈಶ್ವರಪ್ಪ
ಬಿಜೆಪಿ-ಜೆಡಿಎಸ್ ಒಂದಾದ್ದರೆ ಕಾಂಗ್ರೆಸ್ ಸಹಿಸಲ್ಲ: ಸಚಿವ ಈಶ್ವರಪ್ಪ
ಈ ವೇಳೆ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಪ್ರತಿಕ್ರಿಯಿಸಿ, ಈಗ ನೀವು ಮತ್ತೆ ಅವರು ಒಂದಾಗಿದ್ದೀರಲ್ಲ ಎಂದು ಟೀಕಿಸಲು ಮುಂದಾದರು. ಇದಕ್ಕೆ ಉತ್ತರಿಸಿದ ಈಶ್ವರಪ್ಪ, ನಾವಿನ್ನೂ ಒಂದಾಗುತ್ತಿದ್ದೇವೆ. ಆದರೆ ನಾವು ಒಂದಾಗುವುದನ್ನು ಸಹಿಸಲು ಆಗುತ್ತಿಲ್ಲ, ಹೊಟ್ಟೆಯಲ್ಲಿ ಉರಿ ಬಿದ್ದ ಹಾಗಾಗಿದೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:ಈ ಸಿದ್ದರಾಮಯ್ಯ ಯಾವ್ನು ರೀ ಇವ್ನು ಲೆಕ್ಕ ಕೇಳೋಕೆ.. ಸಚಿವ ಈಶ್ವರಪ್ಪ ಏಕ ವಚನ ಪ್ರಯೋಗ..