ಕರ್ನಾಟಕ

karnataka

ETV Bharat / state

ರಾಯಚೂರಿನಲ್ಲಿ ಕೃಷಿ ಮೇಳ... ಡಿಸಿಎಂ ಸವದಿಯಿಂದ ಚಾಲನೆ - ರಾಯಚೂರಿನ ಕೃಷಿ ಮೇಳಕ್ಕೆ ಡಿಸಿಎಂ ಸವದಿಯಿಂದ ಚಾಲನೆ

ನೆಲ-ಜಲ-ಉಳಿಸಿ, ರೈತರ ಆದಾಯ ಹೆಚ್ಚಿಸಿ ಎನ್ನುವ ಘೋಷ ವಾಕ್ಯದೊಂದಿಗೆ ರಾಯಚೂರು ನಗರದ ಹೊರವಲಯದ ಕೃಷಿ ವಿವಿ ಆವರಣದಲ್ಲಿ ಕೃಷಿ ಮೇಳ ಆಯೋಜಿಸಲಾಗಿದೆ.

ಸವದಿಯಿಂದ ಚಾಲನೆ
ಸವದಿಯಿಂದ ಚಾಲನೆ

By

Published : Dec 15, 2019, 7:58 PM IST

ರಾಯಚೂರು:ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳ-2019ರ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಯೋಜಿಸಿರುವ ಇಂತಹ ಕಾರ್ಯಕ್ರಮದಲ್ಲಿ ರೈತರು ಆಗಮಿಸಿ ಸದುಪಯೋಗ ಪಡೆದುಕೊಳ್ಳಬೇಕು. ಕೃಷಿ ವಿಜ್ಞಾನಿಗಳು ಸಹ ರೈತರಿಗೆ ಅನುಕೂಲವಾಗುವ ತಳಿಗಳನ್ನ ಸಂಶೋಧನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಕೃಷಿ ಮೇಳ-2019ರ ಕಾರ್ಯಕ್ರಮಕ್ಕೆ ಲಕ್ಷ್ಮಣ ಸವದಿ ಚಾಲನೆ

ಭತ್ತ, ತೊಗರಿ ಸೇರಿದಂತೆ ವಿವಿಧ ಬೆಳೆಗಳ ಬೆಲೆ ಕುಸಿತಗೊಂಡಿದ್ದರೆ ಅವುಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಖರೀದಿ ಕೇಂದ್ರವನ್ನ ಪ್ರಾರಂಭಿಸುವುದಾಗಿ ಡಿಸಿಎಂ ಸವದಿ ಭರವಸೆ ನೀಡಿದ್ರು.

ABOUT THE AUTHOR

...view details